ಜೀವನಶೈಲಿ

ಕ್ಯಾಬೆಜ್ ಎಲೆಗಳಂತೆ ಕಾಣುವ ಜಾಕೆಟ್ ಕುರಿತು ಬಿಸಿ ಬಿಸಿ ಚರ್ಚೆ;ಅಬ್ಬಾಬ್ಬ,ಇದರ ಬೆಲೆ ಎಷ್ಟು ಗೊತ್ತಾ?

ನ್ಯೂಸ್ ನಾಟೌಟ್ : ಮಾರುಕಟ್ಟೆಗೆ ಹೊಸ ಹೊಸ ಶೈಲಿಯ ಬಟ್ಟೆಗಳು ಲಗ್ಗೆಯಿಡುತ್ತವೆ.ಅದರಲ್ಲೂ ವಿಚಿತ್ರ ಡ್ರೆಸ್ ಗಳಿಗೆ ಯುವ ಪೀಳಿಗೆ ಮಾರು ಹೋಗೋದೆ ಹೆಚ್ಚು.ಅದಕ್ಕಾಗಿ ದಿನಕ್ಕೊಂದರಂತೆ ಬಟ್ಟೆಯ ವಿನ್ಯಾಸಗಳಲ್ಲಿ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ.ಇಲ್ಲೊಂದು ವಿಚಿತ್ರ ಜಾಕೆಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ.

ಡೀಸೆಲ್ ಬ್ರ್ಯಾಂಡ್ ಹೇಗಿದೆ?

ಬಟ್ಟೆಗಳು ಅಂದ ಮೇಲೆ ಅಲ್ಲಿ ಬ್ರ್ಯಾಂಡ್ ಹೆಸರು ಕೂಡ ಮುಖ್ಯ.ಅಂದ ಹಾಗೆ ಈ ಜಾಕೆಟ್ ಡೀಸೆಲ್ ಬ್ರ್ಯಾಂಡ್ ನದ್ದು,ಸೋಶಿಯಲ್ ಮೀಡಿಯಾದಲ್ಲಿ ಈ ಜಾಕೆಟ್ ನೋಡಿ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. ಏನಿದು ಕ್ಯಾಬೆಜ್ ನಂತೆ ಕಾಣುತ್ತೇ ಇದು ಹೊಸ ಸ್ಟೈಲಾ….? ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ದರವೆಷ್ಟು?

ಜಾಕೆಟ್ ಅಂದ ಮೇಲೆ ಮೂರು ಸಾವಿರ ಇರಬಹುದು ಅಥವಾ ಐದು ಸಾವಿರ ಇರಬಹುದೆಂದು ಯೋಚಿಸುತ್ತಿರಬಹುದು.ಈ ಜಾಕೆಟ್ ರೇಟ್ ಕೇಳಿದರೆ ಬೆಚ್ಚಿ ಬೀಳೊದಂತು ಗ್ಯಾರಂಟಿ.
ಅಷ್ಟು ದುಬಾರಿ ಇರುವಾಗ ಬಟ್ಟೆ ಕೂಡ ಆಕರ್ಷಕವಾಗಿ ಕಾಣಬೇಕಲ್ವಾ…? ಆದರೆ ಈ ಜಾಕೆಟ್ ಲುಕ್ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದೆ. ಕ್ಯಾಬೆಜ್ ಎಲೆಗಳಂತೆ ಕಾಣುತ್ತಿರುವ ಈ ಜಾಕೆಟ್ ಬೆಲೆ ಬರೋಬ್ಬರಿ 60,000 ರೂ.!!

ಪ್ರತಿಕ್ರಿಯೆ ಹೇಗಿದೆ?


ಕ್ಯಾಬೆಜ್ ನಂತಯೆ ಕಾಣುವ ಜಾಕೆಟ್ ಅನ್ನು ಟ್ವೀಟ್ ಮಾಡಿದ ಕೂಡಲೇ ಅನೇಕರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಜಾಕೆಟ್ ನ ಬೆಲೆಯಲ್ಲಿ ಆ್ಯಕ್ಟಿವಾ ಗಾಡಿ ಖರೀದಿಸಬಹುದಿತ್ತು,. ಯಾರು ಇಷ್ಟು ದುಬಾರಿ ಜಾಕೆಟ್ ಖರೀದಿಸುತ್ತಾರೆ. ಇದು 2,000 ರೂ ಬೆಲೆಯ ಜಾಕೆಟ್ , ಉಳಿದದ್ದು 58,000 ರೂ ಬ್ರ್ಯಾಂಡಿಂಗ್ ಗಾ? ಬ್ರ್ಯಾಂಡ್ ಹೇಗೆ ಕೆಲಸ ಮಾಡುತ್ತದೆ? ಕ್ಯಾಬೆಜ್ ಎಲೆಗಳು ಕೂಡ ತಾಜಾತನದಿಂದ ಕೂಡಿಲ್ಲವಲ್ಲ ಎಂದಿದ್ದಾರೆ. ಇದರ ಬದಲು ಆದಿ ಮಾನವನಂತೆ ಎಲೆ ಹೊದ್ದುಕೊಂಡಿರುವುದು ಉತ್ತಮ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Related posts

ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

ಪ್ರಧಾನಿ ನರೇಂದ್ರ ಮೋದಿಗೆ ಈ 10 ತಿಂಡಿಗಳೆಂದ್ರೆ ಪಂಚಪ್ರಾಣ, ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮೋದಿಗೆ ಇಷ್ಟವಾದ ಖಾದ್ಯಗಳ ಪಟ್ಟಿ ಹೀಗಿದೆ ನೋಡಿ

ಸೈಕಲ್‌ ನಲ್ಲೇ ದೇಶ ಪರ್ಯಟನೆ ಮಾಡಿದ ರೈತ!