ಕ್ರೀಡೆ/ಸಿನಿಮಾ

ಜನ ಸಾಗರದ ನಡುವೆ ‘ಕಿಚ್ಚ..’ ಎಂದು ಕೂಗಿದ ಪುಟ್ಟ ಬಾಲಕಿ

172

ನ್ಯೂಸ್ ನಾಟೌಟ್: ಪುಟ್ಟ ಬಾಲಕಿಯೊಬ್ಬಳು ಸಾವಿರಾರು ಜನರ ಮಧ್ಯೆ ನಟ ಕಿಚ್ಚ ಸುದೀಪ್ ಅವರನ್ನು ಜೋರಾಗಿ ‘ಕಿಚ್ಚ’ ಎಂದು ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಅಭಿಮಾನವನ್ನು ಮೆಚ್ಚಿ ಕಿಚ್ಚ ಸುದೀಪ್ ಬಾಲಕಿಯನ್ನು ಎತ್ತಿ ಮುದ್ದಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

https://www.instagram.com/reel/Cpm2U_wjkvA/?igshid=YmMyMTA2M2Y%3D

ಸುದೀಪ್​​ ಅವರ ಅಭಿಮಾನಿಗಳ ಮನಗೆದ್ದಿರುವ ಈ ಪುಟ್ಟ ಹುಡುಗಿಯ ಬಗ್ಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಜತೆಗೆ ಸಾಕಷ್ಟು ಸುದೀಪ್​ ಅಭಿಮಾನಿಗಳು ಇದು ನಮ್ಮ ಕಿಚ್ಚ ಬಾಸ್​​ ಪವರ್​​ ಅಂತ ಕಾಮೆಂಟ್​​ ಮಾಡಿದ್ದಾರೆ. ಇದಲ್ಲದೇ ಜೈ ಕಿಚ್ಚ ಬಾಸ್​​ ಅಂತ ಸಾಕಷ್ಟು ಪ್ರತಿಕ್ರಿಯೆಗಳನ್ನು ಕಾಣಬಹುದಾಗಿದೆ. ಈ ವಿಡಿಯೋವನ್ನು ಮಾರ್ಚ್​ 11ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. @attitude__kiccha ಎಂಬ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾದ ಈ ವಿಡಿಯೋ ಮೂರೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಈ ವಿಡಿಯೋ 2,330,764 ವೀಕ್ಷಣೆ ಪಡೆದಿದ್ದು, ಸಾಕಷ್ಟು ಲೈಕ್​​, ಕಾಮೆಂಟ್​​ ಹಾಗೂ ಶೇರ್​​ ಪಡೆದುಕೊಂಡಿದೆ.


See also  ಗೇಮಿಂಗ್​ ಆ್ಯಪ್ ​ನಲ್ಲಿ 1.5 ಕೋಟಿ ರೂ. ಗೆದ್ದದ್ದು ಹೇಗೆ ಪೊಲೀಸ್ ಅಧಿಕಾರಿ..? ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಪಿಎಸ್​ಐ ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget