ನ್ಯೂಸ್ ನಾಟೌಟ್: ಈ ಜಗತ್ತಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡಿಯುತ್ತಲೇ ಇರುತ್ತೆ.ಆಧುನಿಕ ಯುಗದಲ್ಲಿ ಮಾನವನ ಕೆಲಸವೆಲ್ಲವೂ ಯಂತ್ರದಿಂದಲೇ ನಡೆಯುತ್ತಿದೆ.ಹಿಂದೆಯೆಲ್ಲಾ ಉಳುಮೆ ಮಾಡಲು ಎತ್ತು , ಕೋಣಗಳನ್ನು ಬಳಸಲಾಗುತ್ತಿತ್ತು. ಆದರೆ ಇದೀಗ ಸಾಂಪ್ರದಾಯಿಕ ವಿಧಾನದಿಂದ ಉಳುಮೆ ಮಾಡುವ ಬದಲು ಟ್ಯಾಕ್ಟರ್ (tractor)ಗಳನ್ನೇ ಹೆಚ್ಚಿನವರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಇನ್ನು ಮುಂದುವರಿದು ಆಟೋ ಬಳಸಿ ಗದ್ದೆಯನ್ನು ಉಳುಮೆ ಮಾಡಿದ್ದಾನೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.
sajid hussain 786r ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಗದ್ದೆ ಉಳುಮೆ ಮಾಡಲು ಆಟೋವನ್ನು ಬಳಸಿಕೊಂಡಿರುವುದನ್ನು ನೋಡಬಹುದು. ಇಲ್ಲಿ ಆಟೋದ ಹಿಂಭಾಗಕ್ಕೆ ಹಲಗೆಯನ್ನು ಕಟ್ಟಲಾಗಿದ್ದು, ಈ ವ್ಯಕ್ತಿಯೊಬ್ಬನು ಆಟೋವನ್ನು ಓಡಿಸುತ್ತಿದ್ದಾನೆ. ಹಲಗೆಯನ್ನು ಕಟ್ಟಲಾಗಿರುವ ಕಾರಣ ಗದ್ದೆಯ ಮಣ್ಣು ಸಮತಟ್ಟಾಗುತ್ತಿರುವುದನ್ನು ಕಾಣಬಹುದು.
View this post on Instagram