ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಚಿಕಿತ್ಸೆಗೆ ಹಣವಿಲ್ಲದೆ ಖ್ಯಾತ ನಟನಿಂದ 25 ಕೋಟಿ ರೂ. ಸಾಲ ಪಡೆದ ನಟಿ ಸಮಂತಾ..? ಏನದು ಅಷ್ಟು ದುಬಾರಿಯ ಚಿಕಿತ್ಸೆ? ಸಾಲ ಕೊಟ್ಟ ಆ ಖ್ಯಾತ ನಟ ಯಾರು?

ನ್ಯೂಸ್ ನಾಟೌಟ್ : ಸ್ಟಾರ್ ನಟಿ ಸಮಂತಾ ರುತ್​ ಪ್ರಭು, ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದೆ. ಮೈಯೋಸಿಟಿಸ್ (Myositis) ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಚಿಕಿತ್ಸೆ ಪಡೆಯುವ ನಡುವೆಯೇ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದರು.

ಚಿಕಿತ್ಸೆಯ ಸಮಯದಲ್ಲಿ ಸಮಂತಾ ಕ್ಯಾಮೆರಾ ಮುಂದೆ ಬರದೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅನೇಕ ತಿಂಗಳೇ ಆಗಿತ್ತು. ಶಾಕುಂತಲಂ ಸಿನಿಮಾ ಪ್ರಮೋಷನ್ ಸಮಯದಲ್ಲಿ ಸಮಂತಾ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ದರು. ಆದರೆ ಇದರ ನಡುವೆಯೇ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಮತ್ತು ವರುಣ್ ಧವನ್ ಜೊತೆ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ.

ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಈ ಬಗ್ಗೆ ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದ್ದರು.ಇದಕ್ಕೆ ಚಿಕಿತ್ಸೆಯ ಪ್ರಕ್ರಿಯೆ ಸುಮಾರು 2 ರಿಂದ 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಮತ್ತು ಚಿಕಿತ್ಸೆ ಸಮಯದಲ್ಲಿ, ತಯಾರಾದ ಇಮ್ಯುನೊಗ್ಲಾಬ್ಯುಲಿನ್ ಅನ್ನು ರಕ್ತನಾಳಗಳಲ್ಲಿ ತುಂಬಿಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿತ್ತು. ಈ ಚಿಕಿತ್ಸೆ ಪಡೆದುಕೊಳ್ಳುವ ಫೋಟೋಗಳನ್ನು ಕೂಡ ಸಮಂತಾ ಶೇರ್ ಮಾಡಿದ್ದರು.

ಈಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದ್ದು, ಸಮಂತಾ ಅವರು ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಖ್ಯಾತ ನಾಯಕ ನಟನೊಬ್ಬನಿಂದ 25 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಇದು ಅಷ್ಟೊಂದು ದುಬಾರಿ ಚಿಕಿತ್ಸೆಯಾಗಿತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ತಮಗೆ ಸಮಸ್ಯೆ ಇರುವುದು ತಿಳಿಯುತ್ತಲೇ ಸಮಂತಾ ಅವರು ಕೆಲವು ಚಿತ್ರಗಳಿಂದ ಹಿಂದಕ್ಕೆ ಸರಿದಿದ್ದರು, ಮಾತ್ರವಲ್ಲದೇ ಕೆಲವು ಚಿತ್ರಕ್ಕೆ ಅದಾಗಲೇ ಸಹಿ ಹಾಕಲಾಗಿತ್ತು.

ಆದರೆ ಶೂಟಿಂಗ್​ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ನಿರ್ಮಾಪಕರಿಂದ ತಾವು ಪಡೆದಿದ್ದ ಮುಂಗಡ ಹಣವನ್ನು ವಾಪಸ್ ಕೂಡ ಮಾಡಿದ್ದರು. ನಂತರ ಆಯುರ್ವೇದಚಿಕಿತ್ಸೆ ಮೊರೆ ಹೋಗಿದ್ದರು. ಇದರ ನಡುವೆ ಈಕೆ ಇಷ್ಟೊಂದು ಹಣವನ್ನು ಸಾಲ ಪಡೆದಿರುವ ಬಗ್ಗೆ ಸುದ್ದಿಯಾಗುತ್ತಿದೆ. ಆ ನಟ ತೆಗಲು ಸ್ಟಾರ್​ ಎನ್ನಲಾಗಿದ್ದು, ಯಾರು ಎನ್ನುವ ಬಗ್ಗೆ ಸದ್ಯ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Related posts

ಚಲಿಸುತ್ತಿದ್ದ ಸ್ಕೂಲ್‌ ವ್ಯಾನ್‌ನಿಂದ ಏಕಾಏಕಿ ಹೊರಗೆಸೆಯಲ್ಪಟ್ಟ ವಿದ್ಯಾರ್ಥಿನಿಯರು..!, ಅವಘಡದ ಸಿಸಿ ಕ್ಯಾಮೆರಾ ದೃಶ್ಯ ಇಲ್ಲಿದೆ ವೀಕ್ಷಿಸಿ

ಪ್ರಾಂಶುಪಾಲೆಯನ್ನು ಕಾಲೇಜು ಸಿಬ್ಬಂದಿಯೇ ಎಳೆದು ಹಾಕಿ ಗಲಾಟೆ ನಡೆಸಿದ್ದೇಕೆ..? ಇಲ್ಲಿದೆ ವೈರಲ್ ವಿಡಿಯೋ

ಮೋಹಕ ತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಸಿನಿಮಾ ರಿಲೀಸ್ ಯಾವಾಗ? ರಾಜ್‌ ಬಿ ಶೆಟ್ಟಿ ನಟನೆ ಮತ್ತು ನಿರ್ದೇಶನದ ಚಿತ್ರ ಕೊನೆಗೂ ತೆರೆಗೆ