Latestದೇಶ-ವಿದೇಶ

ಶಾಲಾ ಬಸ್ಸಿಗೆ ರೈಲು ಡಿಕ್ಕಿ , ಮೂವರು ವಿದ್ಯಾರ್ಥಿಗಳು ದಾರುಣ ಮೃತ್ಯು, ರೈಲ್ವೇ ಗೇಟ್‌ಕೀಪರ್ ನ ನಿರ್ಲಕ್ಷ್ಯಕ್ಕೆ ಪ್ರಾಣತೆತ್ತ ಪುಟಾಣಿಗಳು..!

831

ನ್ಯೂಸ್‌ ನಾಟೌಟ್‌: ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದು ಮೂವರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ 10 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಶಾಲಾ ಬಸ್‌ ಚಾಲಕ ರೈಲು ಬರುವುದನ್ನು ಗಮನಿಸದೇ ಹಳಿ ದಾಟಲು ಯತ್ನಿಸಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ರೈಲು ಡಿಕ್ಕಿಯಾದ ರಭಸಕ್ಕೆ ಬಸ್‌ ನಜ್ಜುಗುಜ್ಜಾಗಿದ್ದು, ಹಲವಾರು ಅಡಿಗಳಷ್ಟು ದೂರ ಹೋಗಿ ಬಿದ್ದಿದೆ. 

ಈ ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದು, ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ರೈಲ್ವೇ ಕ್ರಾಸಿಂಗ್‌ನಲ್ಲಿದ್ದ ಗೇಟ್‌ಕೀಪರ್ ನಿದ್ರಿಸುತ್ತಿದ್ದ. ಸಮಯಕ್ಕೆ ಸರಿಯಾಗಿ ಗೇಟ್ ಮುಚ್ಚದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಹೆಚ್ಚಿನ ಸಾವುನೋವುಗಳು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

See also  ನಟ ದುನಿಯಾ ವಿಜಯ್ ನಿಂದ ಸಹಾಯ ಪಡೆದು ಜೈಲಿಂದ ಬಿಡುಗಡೆಯಾಗಿದ್ದವನಿಂದ ಜೋಡಿ ಕೊಲೆ..! ಏನಿದು ಘಟನೆ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget