ನ್ಯೂಸ್ ನಾಟೌಟ್: ಮಂಗಳೂರಿನ ಕಂಕನಾಡಿಯ ರೈಲು ನಿಲ್ದಾಣದಲ್ಲಿ ಸ್ವಲ್ಪದರಲ್ಲೇ ಭಾರಿ ದೊಡ್ಡ ರೈಲು ದುರಂತವೊಂದು ತಪ್ಪಿ ಹೋಗಿದೆ. ಹಳಿ ತಪ್ಪಿದ ರೈಲೊಂದು ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಬೋಗಿಗಳನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ರೈಲಿನೊಳಗಿದ್ದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.