ದೇಶ-ಪ್ರಪಂಚ

ಪ್ರಿಯತಮನೊಂದಿಗೆ ರಾತ್ರಿ ಎಣ್ಣೆ ಪಾರ್ಟಿ..!,ಶಾಶ್ವತ ನಿದ್ದೆಗೆ ಜಾರಿದ ಯುವತಿ ಮರುದಿನ ಬೆಳಗ್ಗೆ ಏಳಲೇ ಇಲ್ಲ..! ಆಗಿದ್ದೇನು?

ನ್ಯೂಸ್‌ ನಾಟೌಟ್ :  ಬಾಯ್​ಫ್ರೆಂಡ್​ ಜತೆ ಸೇರಿ ಮದ್ಯ ಸೇವಿಸಿದ ವಿದ್ಯಾರ್ಥಿನಿಯೊಬ್ಬಳು ಇನ್ನೆಂದೂ ಬಾರದ ಲೋಕಕ್ಕೆ ಪ್ರಯಾಣಿದ್ದಾಳೆ. ಡ್ರಗ್ಸ್​ನಿಂದ ಆಕೆಯ ಪ್ರಾಣ ಚೆಲ್ಲಿರಬಹುದೇ ಎಂಬ ಸಂಶಯ ಶುರುವಾಗಿ ಆಕೆಯ ಬಾಯ್​ಫ್ರೆಂಡ್​ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಿತಿ ಏಂಜೆಲ್​ (19) ಉಸಿರು ಚೆಲ್ಲಿದ ಯುವತಿಯೆಂದು ತಿಳಿದು ಬಂದಿದೆ.ಊಟಿಯ ಬಾಂಬೆ ಕ್ಯಾಸ್ಟ್ಲ್​ ಮೂಲದ ಬಾಯ್​ಫ್ರೆಂಡ್​ ಆಕಾಶ್​ (20)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆಕಾಶ್​ ತಂದೆ-ತಾಯಿ ಬೇರೆ ಬೇರೆ ವಾಸಿಸುತ್ತಿದ್ದರು. ಹೀಗಾಗಿ ಆತ ತನ್ನ ಅಜ್ಜಿಯ ಜತೆ ನೆಲೆಸಿದ್ದ. ಯುವತಿ ರಿತಿ, ಊಟಿಯ ಪಿಂಕರ್​ ಪೋಸ್ಟ್​ ಮೂಲದವಳು. ಊಟಿಯ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು 10ನೇ ತರಗತಿಯವರೆಗೆ ಒಟ್ಟಿಗೆ ಓದಿದ್ದರು ಎನ್ನಲಾಗಿದೆ.

ಇವರಿಬ್ಬರ ನಡುವೆ ಆತ್ಮೀಯತೆ ಕೊನೆಗೆ ಪ್ರೀತಿಗೆ ತಿರುಗಿತ್ತು.ರಿತಿ ಏಂಜೆಲ್​ ಕೊಯಮತ್ತೂರಿನಲ್ಲಿರುವ ಖಾಸಗಿ ನರ್ಸಿಂಗ್​ ಕಾಲೇಜು ಸೇರಿದ್ದು ಕೆಲಸ ನಿರ್ವಹಿಸುತ್ತಿದ್ದಳು. ಆಕಾಶ್​ ನೀಲಗಿರಿಯಲ್ಲಿ ಖಾಸಗಿ ಇಂಜಿನಿಯರಿಂಗ್​ ಕಾಲೇಜು ಸೇರಿದನು. ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಇದೇ ಭೇಟಿ ಇಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು ಬಲಪಡಿಸಿತು. ಹೀಗಿರುವಾಗ ಕಳೆದ ಶನಿವಾರ ಕಾಲೇಜಿಗೆ ರಜೆ ಇದ್ದ ಕಾರಣ ಗೆಳೆಯನ ಕೋರಿಕೆಯಂತೆ ಕೊಯಮತ್ತೂರಿನಿಂದ ರಿತಿ ಏಂಜೆಲ್ ಬಂದಿದ್ದಳು.

​ ರಿತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬರುವಾಗ ಇಬ್ಬರು ಆನ್‌ಲೈನ್‌ನಲ್ಲಿ ಊಟ ಬುಕ್ ಮಾಡಿ ಮನೆಗೆ ತಂದರು. ಇದಾದ ನಂತರ ಆಕಾಶ್ ಮತ್ತು ರಿತಿ ಏಂಜೆಲ್ ಮದ್ಯ ಸೇವಿಸಿದ್ದಾರೆ. ಬಳಿಕ ಮೋಟಾರ್​ ಬೈಕ್​​ನಲ್ಲಿ ಸಮೀಪದ ಪೈನ್ ಅರಣ್ಯ ಪ್ರದೇಶಕ್ಕೆ ತೆರಳಿ ಮ್ಯಾಜಿಕ್ ಮಶ್ರೂಮ್​ಗಳನ್ನು ತೆಗೆದುಕೊಂಡು ವೈನ್ ಸಮೇತ ತಿಂದಿದ್ದಾರೆ. ಇದರಿಂದ ಇಬ್ಬರೂ ತೀವ್ರ ಮಾದಕತೆಗೆ ಒಳಗಾಗಿ ನಿದ್ರೆಗೆ ಜಾರಿದ್ದಾರೆ.

ಬೆಳಗ್ಗೆ ಎಚ್ಚರಗೊಂಡ ಆಕಾಶ್, ರಿತಿ ಏಂಜೆಲ್ ಹಾಸಿಗೆಯಿಂದ ಏಳದಿರುವುದನ್ನು ಕಂಡು ಶಾಕ್ ಆಗಿದ್ದಾನೆ. ತಕ್ಷಣ ಆಕಾಶ್​ ಆಂಬ್ಯುಲೆನ್ಸ್​ಗಾಗಿ 108ಕ್ಕೆ ಕರೆ ಮಾಡಿದ್ದಾನೆ. ಪೊಲೀಸರು ಅನುಮಾನಾಸ್ಪದ ಕೊನೆಯುಸಿರು ಪ್ರಕರಣ ದಾಖಲಿಸಿಕೊಂಡು ಬಾಯ್​ಫ್ರೆಂಡ್​ ಆಕಾಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ರಿತಿ ಏಂಜೆಲ್ ಈ ಘಟನೆ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

Related posts

ಭಾರತದ ಕಚ್ಚಾ ತೈಲ ಆಮದು ಬಿಲ್ ನಲ್ಲಿ ಭಾರೀ ಡಿಸ್ಕೌಂಟ್ ನೀಡಿದ ರಷ್ಯಾ, ಬರೋಬ್ಬರಿ 790 ಕೋಟಿ ಡಾಲರ್ ಉಳಿತಾಯ..!

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವಕೀಲೆ ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಪ್ರಮಾಣವಚನ

ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಭಾರೀ ಮುಖಭಂಗ, ಅತ್ತ ಮಂಡ್ಯದಲ್ಲಿ ಚಿಕ್ಕಪ್ಪ ಕುಮಾರಸ್ವಾಮಿಗೆ ಭರ್ಜರಿ ಜಯ