ಕ್ರೈಂವೈರಲ್ ನ್ಯೂಸ್

ಮೊದಲ ರಾತ್ರಿಯೇ ಗಂಡನ ಜೀವಕ್ಕೆ ಗಂಡಾಂತರ! ಸೀಲಿಂಗ್ ಫ್ಯಾನ್ ಬಿದ್ದು ಮದುಮಗನ ಸ್ಥಿತಿ ಗಂಭೀರ!

142

ನ್ಯೂಸ್‌ ನಾಟೌಟ್‌: ಮೊದಲ ರಾತ್ರಿಯಂದೇ ನವ ದಂಪತಿ ಮಲಗಿದ್ದ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಬಿದ್ದು, ಮದುಮಗ ಗಂಭೀರ ಗಾಯಗೊಂಡ ಘಟನೆ ರಾಜಸ್ಥಾನದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ.
ನಾಗಪುರ ಜಿಲ್ಲೆಯ ದಿವಾನಾ ಪ್ರದೇಶದ ಮಕ್ರನಾ ನಗರದಲ್ಲಿ ಈ ಘಟನೆ ನಡೆದಿದೆ. ಮೊದಲ ರಾತ್ರಿಗೆ ಶೃಂಗರಿಸಿದ ಮನೆಯಲ್ಲಿ ಯುವಕ ಮಲಗಿದ್ದು, ಈ ವೇಳೆ ಫ್ಯಾನ್ ಕಳಚಿ ಯುವಕನ ಮೇಲೆ ಬಿದ್ದಿದೆ. ಪರಿಣಾಮ ಯುವಕನ ಕುತ್ತಿಗೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ಕುಟುಂಬದವರು ಸಾಗಿಸಿದ್ದು, ವೈದ್ಯರು ಆತನ ಕುತ್ತಿಗೆಗೆ 26 ಹೊಲಿಗೆ ಹಾಕಿದ್ದಾರೆ.

ಪ್ರಸ್ತುತ ಯುವಕನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮದುವೆಯಾಗಿ ಮಾರನೇ ದಿನವೇ ನವ ದಂಪತಿಯ ಮೊದಲ ರಾತ್ರಿ ಆಯೋಜನೆ ಮಾಡಲಾಗಿದ್ದು, ಇದಕ್ಕಾಗಿ ಕೋಣೆಯನ್ನು ಶೃಂಗಾರಗೊಳಿಸಲಾಗಿತ್ತು. ಆದರೆ ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು, ಮದುಮಗನ ಕುತ್ತಿಗೆಗೆ 26 ಸ್ಟಿಚ್‌ಗಳನ್ನು ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಅಂದ ಹಾಗೆ ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಕ್ರಂ ಅಬ್ದುಲ್ ಸಿಸೋಡಿಯಾ ಎಂಬಾತನೇ ಹೀಗೆ ಫ್ಯಾನ್ ಬಿದ್ದು ಗಾಯಗೊಂಡ ವರ ಎನ್ನಲಾಗಿದೆ. ಜೂನ್ 9 ರಂದು ಈತನ ಮದುವೆ ನಡೆದಿತ್ತು. ಗೌಡಬಸ್ ಮೊಹಲ್ಲಾ ನಿವಾಸಿಯಾಗಿದ್ದ ಇಕ್ರಂ ಅಬ್ದುಲ್ಲಾ ಸರಾಯ್ ನಿವಾಸಿ ಜನ್ನತ್ ಎಂಬಾಕೆಯನ್ನು ವಿವಾಹವಾಗಿದ್ದ.

ಮದುವೆಯ ಸಂಪ್ರದಾಯದ ಪ್ರಕಾರ ವಧುವನ್ನು ಆಕೆಯ ತಾಯಿ ಮನೆಗೆ ಕಳುಹಿಸಿಕೊಡಲಾಗಿದ್ದು, ಮರು ದಿನ ಮೊದಲರಾತ್ರಿಯ ಏರ್ಪಾಡು ಆಯೋಜಿಸಲಾಗಿದ್ದು, ಮನೆ ಬಂಧುಗಳು ನೆಂಟರಿಷ್ಟರಿಂದ ತುಂಬಿತ್ತು. ಈ ವೇಳೆ ಇಕ್ರಾಂ ತನ್ನ ಮೊದಲ ರಾತ್ರಿಗೆ ಶೃಂಗರಿಸಿದ ಕೋಣೆಯಲ್ಲಿ ಹಗಲು ಮಲಗಿದ್ದ. ಈ ವೇಳೆ ಆತನ ಮೇಲೆ ಫ್ಯಾನ್ ಕಳಚಿ ಬಿದ್ದಿದೆ. ಪರಿಣಾಮ ಆತನ ಕುತಿಗೆ ಕೈ ಹಾಗು ತಲೆಗೆ ಗಾಯಗಳಾಗಿದ್ದು, ಆತ ರಕ್ತದ ಮಡುವಲ್ಲಿ ಬಿದ್ದಿದ್ದ, ಕೂಡಲೇ ಸಂಬಂಧಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕುತ್ತಿಗೆಗೆ 26 ಸ್ಟಿಚ್‌ಗಳನ್ನು ಹಾಕಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

See also  ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಮಂಗಮಾಯ..! ಬಸ್ ಸ್ಟ್ಯಾಂಡ್ ನಲ್ಲಿ ಪತಿ, ಪುಟ್ಟ ಮಗುವಿನ ಜೊತೆಯಲ್ಲಿದ್ದಾಗಲೇ 45 ಗ್ರಾಂ ಚಿನ್ನ ಕಾಣೆಯಾಗಿದ್ದು ಹೇಗೆ..?
  Ad Widget   Ad Widget   Ad Widget   Ad Widget