ಕ್ರೈಂಬೆಂಗಳೂರು

ವಾಹನ ಸವಾರರಿಗೆ ಬಿತ್ತು ಬರೋಬ್ಬರಿ 68 ಲಕ್ಷ ದಂಡ..! ಏನಿದು ಅಂತಹ ನಿಯಮೋಲ್ಲಂಘನೆ?

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್‌ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಕೇಳುತ್ತಿಲ್ಲವೆಂದು ವಾಹನ ಸವಾರರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಆದರೆ, ಟ್ರಾಫಿಕ್‌ ಪೊಲೀಸರು ಡಿಜಿಟಲ್‌ ತಂತ್ರಜ್ಞಾನದ ಕ್ಯಾಮೆರಾಗಳ ಮೂಲಕ 2023ರ ಜನವರಿಯಿಂದ ಅಕ್ಟೋಬರ್‌ವರೆಗೆ ಬರೋಬ್ಬರಿ 68 ಲಕ್ಷಕ್ಕೂ ಅಧಿಕ ಸಂಚಾರಿ ನಿಯಮ ಉಲ್ಲಂಘನೆ ಕೇಸ್‌ಗಳನ್ನು ದಾಖಲಿಸಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಬೆಂಗಳೂರು ಟ್ರಾಫಿಕ್‌ ಪೊಲೀಸರು ರಸ್ತೆಯಲ್ಲಿ ಚೆಕ್ಕಿಂಗ್ ಮಾಡುವುದನ್ನ ನಿಲ್ಲಿಸಿದ್ದಾರೆ. ಹೀಗಾಗಿ, ಪೊಲೀಸರು ರಸ್ತೆಯಲ್ಲಿ ಕಾಣೋಲ್ಲ ಅಂತಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗಿದೆ. ಕೇವಲ 10 ತಿಂಗಳಲ್ಲಿ ಬರೋಬ್ಬರಿ 68 ಲಕ್ಷಕ್ಕೂ ಅಧಿಕ ಟ್ರಾಫಿಕ್ ರೂಲ್ಸ್ ಬ್ರೇಕ್ ಕೇಸ್ ದಾಖಲು‌ ಮಾಡಿದ್ದಾರೆ. ಪೊಲೀಸರು ತಂತ್ರಜ್ಞಾನ ಬಳಸಿ ಕೇಸ್ ಮಾಡಿ, ನಂತರ ದಂಡ ವಸೂಲಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ನಗರದಲ್ಲಿ ಸಂಚಾರ ಮಾಡುವಾಗ ಯಾವುದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾದ್ರೆ ಪೋಟೊ ಸಮೇತ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಟ್ರಾಫಿಕ್ ಸಿಸಿಟಿವಿ ಪರಿಶೀಲನೆ ನಡೆಸಿ ಕೇಸ್ ಹಾಕ್ತಿದ್ದ ಪೊಲೀಸರು. ತಂತ್ರಜ್ಞಾನದ ಮೂಲಕ ಕೇಸ್ ಹಾಕಿ ದಂಡ ವಸೂಲಿಗೆ ಫ್ಲಾನ್ ಮಾಡಿದ್ದಾರೆ.

2023ರ ಹತ್ತು ತಿಂಗಳಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವವರ ಸಂಖ್ಯೆಗೆ ಮೀತಿಯೆ ಇಲ್ಲ. ಹೆಲ್ಮೆಟ್ ರಹಿತ ಬೈಕ್ ಚಾಲನೆ 31.49 ಲಕ್ಷ ಕೇಸ್ ದಾಖಲು ಮಾಡಲಾಗಿದೆ. ಹೆಲ್ಮೆಟ್ ಧರಿಸದ ಹಿಂಬದಿ ಸವಾರ 8.97 ಲಕ್ಷ ಕೇಸ್ ದಾಖಲಿಸಲಾಗಿದ್ದು, ಬೈಕ್‌ ಸವಾರರಿಂದ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕೆ 8.46 ಲಕ್ಷ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ನಗರದ ನೋ ಪಾರ್ಕಿಂಗ್ ರಸ್ತೆಯಲ್ಲಿ ತಪ್ಪಾಗಿ ಪಾರ್ಕಿಂಗ್‌ ಮಾಡಿದ ವಾಹನಗಳ ಮೇಲೆ 8.91 ಲಕ್ಷ ಕೇಸ್ ದಾಖಲು ಮಾಡಲಾಗಿದೆ.

ನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ 1.15 ಲಕ್ಷ ಪ್ರಕರಣ, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು 6.15 ಲಕ್ಷ ಪ್ರಕರಣ ಸೇರಿದಂತೆ ಒಟ್ಟಾರೆ 2023ರ ಜನವರಿಯಿಂದ ಈವರೆಗೆ 68.30 ಲಕ್ಷ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಸದರಿ ವರ್ಷದಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸರ್ಕಾರದಿಂದ ಅವಕಾಶ ನೀಡಿಲ್ಲ.

ಟ್ರಾಫಿಕ್‌ ಪೊಲೀಸರು ಒಂದೆಡೆ ಪೇಪರ್ ಲೇಸ್ ಕೇಸ್ ಹಾಕುವ ಸಲುವಾಗಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸದ ಪರಿಣಾಮ ಟ್ರಾಫಿಕ್ ರೂಲ್ಸ್ ಬ್ರೇಕ್ ಆಗ್ತಿರೋ ಸಾಧ್ಯತೆಯಿದೆ. ಆದರೆ, ವಾಹನ ಸವಾರರು ಮಾತ್ರ ದುಬಾರಿ ಬೆಲೆಯ ದಂಡ ತೆರುತ್ತಿದ್ದಾರೆ ಎನ್ನಲಾಗಿದೆ.

Related posts

ಪ್ರಿಯತಮೆಯ ಮನೆ ಮುಂದೆ ಪೊಲೀಸ್ ಕಾನ್‌ಸ್ಟೇಬಲ್ ನ ಪತ್ನಿಯಿಂದ ಪ್ರತಿಭಟನೆ..! ಏನಿದು ಪೊಲೀಸಪ್ಪನ ಪೋಲಿಯಾಟ..?

ಸುಳ್ಯ: ಮಣಿಪುರದಲ್ಲಿ ಮಹಿಳೆಯರ ಶೋಷಣೆ, ಸುಳ್ಯದಲ್ಲಿ ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್

ಜಾತಿನಿಂದನೆ ಕೇಸ್ ದಾಖಲಿಸಿದಕ್ಕೆ ಯುವಕ ಆತ್ಮಹತ್ಯೆ..! ಗ್ರಾಮದ ಜಾತ್ರೆಯಲ್ಲಿ ನಡೆದದ್ದೇನು..?