ಕರಾವಳಿಪುತ್ತೂರು

ಶಾಲೆಯಿಂದ ಸೊತ್ತುಗಳನ್ನು ಕದಿಯುತ್ತಿದ್ದ ಕಳ್ಳ ಶಿಕ್ಷಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ..!,ಅಷ್ಟಕ್ಕೂ ಈತ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

221

ನ್ಯೂಸ್ ನಾಟೌಟ್ :ಶಾಲಾ ಸೊತ್ತುಗಳನ್ನು ಕದಿಯುತ್ತಿದ್ದ ವ್ಯಕ್ತಿ ಶಿಕ್ಷಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ.ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ಇದೇ ಶಾಲೆಯಿಂದ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಇಟ್ಟಿದ್ದ ಡ್ರಮ್‌ ಮತ್ತು ಇತರ ಸ್ಟೀಲ್‌ , ಪ್ಲಾಸ್ಟಿಕ್‌ ಸೊತ್ತುಗಳು ನಾಪತ್ತೆಯಾಗಿದ್ದವು.ಈ ಬಗ್ಗೆ ವಿಚಾರಿಸಿದಾಗ ಇದು ಯಾರ ಗಮನಕ್ಕೂ ಬಂದಿರಲಿಲ್ಲ.ಇದರ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಿತು. ಶಾಲೆಯ ಉಪಪ್ರಾಂಶುಪಾಲರು ಸಿಸಿ ಟಿವಿ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಕಳವು ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.

ಈ ಕುರಿತು ಶಾಲೆಯ ಶಿಕ್ಷಕರಿಗೆ, ಎಸ್‌ಡಿಎಂಸಿ ಮತ್ತು ನಗರಸಭಾ ಸ್ಥಳೀಯ ಸದಸ್ಯರಿಗೆ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.ಮತ್ತೆ ಅ. 5ರಂದು ಸ್ಟೀಲ್‌ ಡ್ರಮ್‌ ಕದ್ದೊಯ್ದ ವ್ಯಕ್ತಿ ಶಾಲೆಯ ಆವರಣದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಉಪಪ್ರಾಂಶುಪಾಲರು ಮತ್ತು ಶಿಕ್ಷಕರು ಆತನನ್ನು ಹಿಡಿದಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿರುವ ಕಳ್ಳ ಉತ್ತರಪ್ರದೇಶ ಮೂಲದವನೆನ್ನಲಾಗಿದೆ ಎಂದು ತಿಳಿದು ಬಂದಿದೆ.

See also  ಸ್ವಯಂ ಪ್ರೇರಿತ ಬಂದ್ ಗೆ ಹಿಂದೂ ಸಂಘಟನೆಗಳ ಕರೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget