ಕರಾವಳಿಸುಳ್ಯ

ಸುಳ್ಯ: ಪರೀಕ್ಷೆ ಭಯಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ; ಚಿಕಿತ್ಸೆ ಫಲಿಸದೇ ಮೃತ್ಯು

ನ್ಯೂಸ್‌ ನಾಟೌಟ್: ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಭಯಕ್ಕೆ ೧೫ ದಿನಗಳ ಹಿಂದೆ ವಿಷ ಸೇವಿಸಿದ್ದು, ಚಿಕಿತ್ಸೆ ಫಲಿಸದೇ ಮೃತ ಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಸಂಭವಿಸಿದೆ.

ಪಾಂಬಾರು ಸೋಮಸುಂದರ ಅವರ ಪುತ್ರಿ ಪುತ್ತೂರಿನ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಆರತಿ (17) ಮೃತಪಟ್ಟ ವಿದ್ಯಾರ್ಥಿನಿಯೆಂದು ತಿಳಿದು ಬಂದಿದೆ. ಆರತಿ ಹೆಚ್ಚಾಗಿ ಮೊಬೈಲ್‌ ಪೋನ್‌ ಬಳಕೆ ಮಾಡುತ್ತಿದ್ದುದಕ್ಕೆ ಓದಿನ ಕಡೆ ಗಮನ ನೀಡುವಂತೆ ಮನೆಯವರು ಬುದ್ಧಿವಾದ ಹೇಳಿದ್ದರು. ಈ ವೇಳೆ ಫೆ. 22ರಂದು ಕಾಲೇಜಿನಿಂದ ಮನೆಗೆ ಬಂದ ಆಕೆ ನನಗೆ ಪರೀಕ್ಷೆಯ ಭಯವಾಗುತ್ತದೆ. ನಾನು ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದಾಳೆ.

ಕೂಡಲೇ ಮನೆಯವರು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಮಾ. 2ರಂದು ಮತ್ತೆ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ಯುವತಿ ಹೆತ್ತವರು ಮತ್ತು ಸಹೋದರರನ್ನು ಅವರು ಅಗಲಿದ್ದಾರೆ.

Related posts

ಸುಳ್ಯ: ನೆಹರೂ ಮಮೋರಿಯಲ್ ಕಾಲೇಜಿನಲ್ಲಿ RDC-II ಮತ್ತು CATC ಶಿಬಿರ ಸಂಪನ್ನ

ಸಾಮಾನ್ಯ ರೈತನ ಮಗ ಬಿಗ್‌ಬಾಸ್‌ ವಿನ್ನರ್‌!,ಇತಿಹಾಸದಲ್ಲೇ ಮೊದಲ ಬಾರಿಗೆ ರೈತನ ಮಗ ವಿನ್ ಆಗಿದ್ದೇಗೆ?

ಸುಳ್ಯ: ಶ್ರೀ ಚೆನ್ನಕೇಶವ ದೇವಾಲಯದ ಬ್ರಹ್ಮರಥದ ಶೆಡ್‌ಗೆ ಗುದ್ದಲಿ ಪೂಜೆ, ಎಒಎಲ್‌ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಸೇರಿದಂತೆ ಗಣ್ಯರು ಭಾಗಿ