ಕರಾವಳಿಕೊಡಗು

ಮಡಿಕೇರಿ: ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾಗೆ ಜಿಂಕೆ ಡಿಕ್ಕಿ..! ರಿಕ್ಷಾ ಪಲ್ಟಿ,8 ತಿಂಗಳ ಮಗು ದಾರುಣ ಸಾವು

100

ನ್ಯೂಸ್‌ ನಾಟೌಟ್ : ಮಡಿಕೇರಿಯಲ್ಲೊಂದು ದಾರುಣ ಘಟನೆ ಬಗ್ಗೆ ವರದಿಯಾಗಿದೆ.ರಸ್ತೆಯಲ್ಲಿ ಚಲಿಸುತ್ತಿದ್ದ ರಿಕ್ಷಾಗೆ ಜಿಂಕೆ ಡಿಕ್ಕಿಯಾಗಿದ್ದು,ಪರಿಣಾಮ ರಿಕ್ಷಾ ಪಲ್ಟಿಯಾಗಿ 8 ತಿಂಗಳ ಮಗು ಕೊನೆಯುಸಿರೆಳೆದಿದೆ.ಈ ಘಟನೆ ಶ್ರೀಮಂಗಲ ಬೀರುಗ ಗ್ರಾಮದಲ್ಲಿ ನಡೆದಿದೆ.

ಕಾಫಿ ತೋಟದ ಕೆಲಸಕ್ಕಾಗಿ ಝಾರ್ಖಂಡ್‌ ಮೂಲದ ಕೂಲಿ ಕಾರ್ಮಿಕರು ಶ್ರೀಮಂಗಲಕ್ಕೆ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಬೀರುಗ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಏಕಾಏಕಿ ಜಿಂಕೆಯೊಂದು ಅಡ್ಡ ಬಂದು ಆಟೋರಿಕ್ಷಾಕ್ಕೆ ಢಿಕ್ಕಿಯಾಗಿದೆ.

ಪರಿಣಾಮ ಆಟೋ ಪಲ್ಟಿಯಾಗಿದ್ದು, ತಾಯಿಯ ಮಡಿಲಿನಲ್ಲಿದ್ದ 8 ತಿಂಗಳ ಅನುರಾಗ್‌ ರಾಜ್‌ ಎಂಬ ಮಗು ಆಟೋರಿಕ್ಷಾದಡಿ ಸಿಲುಕಿ ಮೃತಪಟ್ಟಿದೆ.ಈ ಘಟನೆ ಕುರಿತು ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ ಸಂಬಂಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.ಮಗು ಸಾವನ್ನಪ್ಪಲು ಜಿಂಕೆ ಕಾರಣ. ಮಗುವನ್ನು ಕಳೆದು ಕೊಂಡ ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಇಲಾಖೆ ಪರಿಹಾರ ನೀಡ‌ಬೇಕೆಂದು ಆಗ್ರಹಿಸಿದರು.

See also  ಕಾರುಗಳ ನಡುವೆ ಡಿಕ್ಕಿ, ಏಳು ಮಂದಿಗೆ ಗಾಯ
  Ad Widget   Ad Widget   Ad Widget   Ad Widget   Ad Widget   Ad Widget