ಕರಾವಳಿರಾಜಕೀಯ

ಮುಸ್ಲಿಂ ಮಹಿಳೆ ಮನೆಗೆ ಹೋಗಿದ್ದ ಹಿಂದೂ ಯುವಕ,ಐದಕ್ಕೂ ಹೆಚ್ಚು ಜನರ ಗುಂಪಿನಿಂದ ಮಾರಾಣಾಂತಿಕ ಹಲ್ಲೆ

322

ನ್ಯೂಸ್ ನಾಟೌಟ್ : ಮುಸ್ಲಿಂ ಮಹಿಳೆ ಮನೆಗೆ ಹೋಗಿದ್ದ ಎಂಬ ಕಾರಣಕ್ಕೆ ಅನ್ಯ ಕೋಮಿನ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಮೇ. 26 ರಂದು ನಡೆದಿದೆ.

ಅಜಿತ್ ಎಂಬ ಯುವಕನ ಮೇಲೆ ದಾಳಿ ನಡೆದಿದ್ದು, ಐದಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿರುವುದಾಗಿ ಗಾಯಾಳು ಅಜಿತ್ ಆರೋಪಿಸಿದ್ದಾರೆ.ಸುಹೇಬ್ ಸೇರಿದಂತೆ ಹಲವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಜಿತ್ ಆರೋಪಿಸಿದ್ದಾರೆ.ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದಿರೋ ಅಜಿತ್, ಕಾಂಗ್ರೆಸ್ ಸರ್ಕಾರ, ಎಂಎಲ್ಎ ಬಂದ್ಮೇಲೆ ಈ ರೀತಿ ಆಗುತ್ತಿದೆ ಎಂದಿದ್ದಾರೆ. ಸದ್ಯ ಮೂಡಿಗೆರೆ ಆಸ್ಪತ್ರೆಯಲ್ಲಿ ಅಜಿತ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

See also  ಗುತ್ತಿಗಾರಿನಲ್ಲಿ ಅನಾಥ ವ್ಯಕ್ತಿಗಾಗಿ ಮಿಡಿದ ಹೃದಯಗಳು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget