Latestನೆಲ್ಯಾಡಿ

ಕೊಕ್ಕಡ: ಬೈಕ್ ಗೆ ಜೀಪ್ ಡಿಕ್ಕಿ ಹೊಡೆದು ತಂದೆ-ಮಗಳಿಗೆ ಗಾಯ,ಏನಿದು ಘಟನೆ?

408

ನ್ಯೂಸ್‌ ನಾಟೌಟ್: ಬೈಕ್ ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಾದ ತಂದೆ ಮಗಳು ಗಾಯಗೊಂಡ ಘಟನೆ ಮೇ.೮ರಂದು ಸಂಭವಿಸಿದೆ. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಸೌತಡ್ಕ ಕ್ರಾಸ್‌ ನಿವಾಸಿ ಇ.ಪಿ. ಚಾಕೋ (57) ಹಾಗೂ ಪುತ್ರಿ ಸ್ನೇಹ ಚಾಕೋ ಗಾಯಗೊಂಡವರು.

ಬೆಳಗ್ಗಿನ ವೇಳೆ ಕೊಕ್ಕಡ ಜೋಡುಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ಬೈಕ್ ಪಟ್ರಮೆ ಕಡೆಗೆ ಹೋಗುತ್ತಿತ್ತು. ಈ ವೇಳೆ ಕೊಕ್ಕಡ ಜೋಡುಮಾರ್ಗದ ಬಳಿ ತಲುಪುತ್ತಿದ್ದಂತೆ ಮಣ್ಣುರಸ್ತೆಯಲ್ಲಿ ನಿಲ್ಲಿಸಿದ್ದ ಜೀಪನ್ನು ಅದರ ಚಾಲಕ ಕುಶಾಲಪ್ಪ ಗೌಡರು ಒಮ್ಮೆಲೇ ರಸ್ತೆಗೆ ಚಲಾಯಿಸಿದ ಪರಿಣಾಮ ಬೈಕ್ ನ ಬಲಬದಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

See also  ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್: ಪಾಯಿಂಟ್ ನಂ. 13ರಲ್ಲಿ ಸಿಗಲಿದ್ಯಾ ಮಹತ್ವದ ಸಾಕ್ಷ್ಯ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget