ಉಡುಪಿಕರಾವಳಿ

ಬೆಳ್ತಂಗಡಿ:ದೆವ್ವದ ಕಾಟಕ್ಕೆ ಬೆಚ್ಚಿ ಬಿದ್ದ ಕುಟುಂಬ ಮನೆಯನ್ನೇ ತೊರೆದರು!ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿರುವ ಹುಲಿಕಲ್‌ ನಟರಾಜ್‌

ನ್ಯೂಸ್‌ ನಾಟೌಟ್‌ : ಬೆಳ್ತಂಗಡಿ ಸಮೀಪವಿರುವ ಮನೆಯೊಂದರಲ್ಲಿ ವಿಚಿತ್ರ ಘಟನಾವಳಿಗಳು ನಡೆಯುತ್ತಿದ್ದ ಸುದ್ದಿ ಇಡೀ ರಾಜ್ಯದಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ಈ ಘಟನೆ ಗುರುವಾರ ಬೆಳಕಿಗೆ ಬಂದಿತ್ತು. ಕೊಲ್ಪೆದಬೈಲ್‌ ಉಮೇಶ್‌ ಶೆಟ್ಟಿ ಅವರ ಮನೆಯಲ್ಲಿ ಕೆಲವು ದಿನಗಳಿಂದ ವಿಚಿತ್ರ ಶಬ್ಧ ಸೇರಿದಂತೆ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿ ಕೊಂಡು ಮನೆ ಮಂದಿ ಆತಂಕಕ್ಕೊಳಗಾಗಿದ್ದರು.ಇದೀಗ ಮನೆಮಂದಿ ಮನೆಯನ್ನೇ ತೊರೆದುಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಘಟನೆ ?

ಇಲ್ಲಿ ಕತ್ತಲು ಆವರಿಸುತ್ತಿದ್ದ ಹಾಗೆ ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಹಾಗೂ ಕುತ್ತಿಗೆ ಹಿಡಿದು ಕೊಂಡ ಅನುಭವವಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಮನೆ ಯಜಮಾನ ಉಮೇಶ್‌ ಶೆಟ್ಟಿ ತಿಳಿಸಿದ್ದರು. ಇದನ್ನು ತಿಳಿದು ಪರಿಸರದ ಹಲವಾರು ಮಂದಿ ಇಲ್ಲಿಗೆ ಭೇಟಿ ನೀಡಿದ್ದು, ಒಂದಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.ಇದು ಪ್ರೇತ ಮತ್ತು ದೈವದ ಸಮಸ್ಯೆಯಾಗಿರಬೇಕೆಂಬುದು ಹಲವರ ಅಭಿಪ್ರಾಯವಾಗಿದೆ.ಮತ್ತೂ ಕೆಲವರು ಹಾಗಾಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಹೀಗಾಗಿ ಹೊರಗಿನವರು ಮನೆಯಲ್ಲಿ ಕಾದು ಕುಳಿತು ಪರಿಶೀಲನೆ ನಡೆಸಿದ್ದಾರೆ. ಆದರೆ ಅಂತಹ ಯಾವುದೇ ವಿಷಯ ಗೊತ್ತಾಗಿಲ್ಲ ಎಂದು ತಿಳಿದು ಬಂದಿದೆ. ಮಕ್ಕಳು ಕೆಲವೊಂದು ಫೋಟೋ ವೀಡಿಯೋ ಮಾಡಿದ್ದು, ಅಸ್ಪಷ್ಟತೆಯಿಂದ ಕೂಡಿದ್ದ ಫೋಟೋವೊಂದು ಕಾಣ ಸಿಕ್ಕಿದೆ.ಈ ಪರಿಸರದಲ್ಲಿ ಇತರ ಕೆಲವು ಮನೆಗಳಿದ್ದು, ಅವರಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ ಎಂದು ತಿಳಿದು ಬಂದಿದೆ. ರವಿವಾರ ಇಲ್ಲಿಗೆ ಹುಲಿಕಲ್‌ ನಟರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Related posts

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’,ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನೀಲಾಂಬಿಕೈ ನಟರಾಜನ್

ಕಡಲ್ಗಳ್ಳರಿಂದ ಪಾಕ್​ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ..! ‘ಇಂಡಿಯಾ ಜಿಂದಾಬಾದ್’ ಘೋಷಣೆ ಕೂಗಿದ ಪಾಕ್ ನಾವಿಕರು

ಸುಳ್ಯ: ಪಾಮ್ ಆಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ..! ತಡರಾತ್ರಿ ಆಸ್ಪತ್ರೆಯೊಳಗೊಂದು ಒದ್ದಾಟ..!