ಚಿಕ್ಕಮಗಳೂರು

ಪ್ರೇಮಿಗೆ ಅಪ್ರಾಪ್ತೆ ಬಾಲಕಿಯರನ್ನು ಪೂರೈಸುತ್ತಿದ್ದ ನರ್ಸ್..! ಮೂವರು ಅರೆಸ್ಟ್, ಏನಿದು ಘಟನೆ?

174

ನ್ಯೂಸ್ ನಾಟೌಟ್ : ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮೂವರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಈ ಘಟನೆ ವರದಿಯಾಗಿದ್ದು, ಕುಪ್ಪಾಳು ಮೊರಾರ್ಜಿ ವಸತಿ ಶಾಲೆಯ ಮೂಲತಃ ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ ಹೋಬಳಿಯ ಮುಳುಕೆರೆ ಗ್ರಾಮದ ನಿವಾಸಿ, ಕಡೂರು ತಾಲೂಕು ಅಂಚೆಚೋಮನಹಳ್ಳಿಯ ಆರೋಗ್ಯ ಇಲಾಖೆಯಲ್ಲಿ ಎಎನ್‌ಎಂ ನರ್ಸ್‌ ಆಗಿರುವ ಚಂದನಾ (26), ಎರಡನೇ ಆರೋಪಿ ಅಂಚೆಚೋಮನಹಳ್ಳಿಯ ಗ್ರಾಮದ ತೊಟ್ಟಿಮನೆ ಸುರೇಶ್‌ (35) ಹಾಗೂ ಮೂರನೇ ಆರೋಪಿ ಸೊರಬ ತಾಲೂಕಿನ ಆನವಟ್ಟಿಯ ಫ್ಯಾನ್ಸಿ ಸ್ಟೋರ್‌ ಮಾಲಕ ವಿನಯ್‌ ಕುಮಾರ್‌(27) ಬಂಧಿತರು ಎಂದು ತಿಳಿದು ಬಂದಿದೆ.

ಚಂದನಾಳಿಗೆ ಈಗಾಗಲೇ ಮದುವೆಯಾಗಿದ್ದು,ಈಗ ಗರ್ಭಿಣಿ ಎಂದು ತಿಳಿದು ಬಂದಿದೆ. ಈಕೆಗೆ ವಿವಾಹಿತ ವಿನಯ್‌ ಕುಮಾರ್‌ ಜತೆ ಪ್ರೇಮವಿದ್ದು,ಆತನಿಗೆ ಚಂದನಾಳು ಮೊರಾರ್ಜಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್‌ ಎಂಬವನ ಸಹಾಯ ಪಡೆದು ವಸತಿಯಲ್ಲಿನ ವಿದ್ಯಾರ್ಥಿನಿಯರನ್ನು ಪೂರೈಸಿದ್ದಳು ಎಂದು ಆರೋಪಿಸಲಾಗಿದೆ.

See also  ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಗೆ ಹೊಡೆದು ಬಾರದ ಲೋಕಕ್ಕೆ ಕಳುಹಿಸಿದ ಪಾಪಿ ಪತಿ,ಮುಗಿಲು ಮುಟ್ಟಿದ ಇಬ್ಬರು ಪುತ್ರಿಯರ ಆಕ್ರಂದನ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget