ಕ್ರೈಂವಿಡಿಯೋವೈರಲ್ ನ್ಯೂಸ್

ಟೊಮೆಟೋ ಹಾರ ಧರಿಸಿ ಸದನಕ್ಕೆ ಬಂದ ಆ ಸಂಸದ ಯಾರು? ಇಲ್ಲಿದೆ ವೈರಲ್ ವಿಡಿಯೋ

286

ನ್ಯೂಸ್ ನಾಟೌಟ್ : ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸುಶೀಲ್ ಕುಮಾರ್ ಗುಪ್ತಾ ಸದನದೊಳಗೆ ಟೊಮೆಟೊ ಹಾರ ಧರಿಸಿ ಇಂದು(ಬುಧವಾರ ೯) ಪ್ರವೇಶಿಸಿದ್ದಾರೆ.
“ನಮ್ಮ ನಡವಳಿಕೆಗೆ ಒಂದು ಮಿತಿಯಿದೆ. ರಾಜ್ಯಸಭೆಯ ಅಧ್ಯಕ್ಷನಾಗಿ, ಗೌರವಾನ್ವಿತ ಸದಸ್ಯರಾದ ಸುಶೀಲ್ ಗುಪ್ತಾ ಅವರು ಬಂದ ರೀತಿಯನ್ನು ನೋಡಿ ನನಗೆ ತುಂಬಾ ನೋವಾಗಿದೆ” ಎಂದು ಧನಕರ್ ಹೇಳಿದರು ಎನ್ನಲಾಗಿದೆ.

ಕೆಲವು ಅಗತ್ಯ ವಸ್ತುಗಳ ಬೆಲೆಗಳು, ವಿಶೇಷವಾಗಿ ಟೊಮೆಟೊಗಳ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದು, ಬೆಲೆ ಏರಿಕೆ ವಿರೋಧಿಸಿ ಗುಪ್ತಾ ಟೊಮೆಟೊದಿಂದ ಮಾಡಿದ ಹಾರವನ್ನು ಧರಿಸಿ ಸದನವನ್ನು ಪ್ರವೇಶಿಸಿದ್ದರು ಎನ್ನಲಾಗಿದೆ.


ಕಲಾಪ ನಡೆಸುವ ವೇಳೆ ಕ್ವಿಟ್‌ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ ಜಗದೀಪ್ ಧನಕರ್‌ ಅವರು, ಎರಡು ನಿಮಿಷ ಮೌನಾಚರಣೆ ಮಾಡುವಂತೆ ಸದಸ್ಯರಿಗೆ ಸೂಚಿಸಿದರು. ಇದಾಗ ಬಳಿಕ ಅಧಿಕೃತ ದಾಖಲೆಗಳನ್ನು ಮಂಡಿಸಲಾಯಿತು.
ಈ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬೈನಲ್ಲಿ ಕ್ವಿಟ್‌ ಇಂಡಿಯಾ ಸಮಾರಂಭದಲ್ಲಿ ಭಾಗಿಯಾಗಲು ಹೊರಟಿದ್ದ ಮಹಾತ್ಮಾ ಗಾಂಧೀಜಿ ಮೊಮ್ಮಗ ತುಷಾರ್‌ ಗಾಂಧಿ ಅವರ ಬಂಧನದ ಬಗ್ಗೆ ಉಲ್ಲೇಖಿಸಿದರು.

’ನೀವು ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ್ದೀರಿ. ನಾವು ಎರಡು ನಿಮಿಷ ಮೌನಾಚರಣೆ ಮಾಡಿದೆವು. ಆದರೆ ತುಷಾರ್ ಗಾಂಧಿಯನ್ನು ಇಂದು ಬಂಧಿಸಲಾಗಿದೆ’ ಎಂದು ಖರ್ಗೆ ಹೇಳಿದರು. ಮುಂದೆ ಮಾತನಾಡಲು ಖರ್ಗೆ ಅವರಿಗೆ ಸಭಾಪತಿಗಳು ಅವಕಾಶ ನಿರಾಕರಿಸಿದರು. ಖರ್ಗೆಯವರು ಮಾತು ಮುಂದುವರಿಸಲು ಮುಂದಾದಾಗ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಗದ್ದಲ ನಡುವೆಯೇ ಗುಪ್ತಾ ಅವರನ್ನು ಗಮನಿಸಿದ ಧನಕರ್‌ ಅವರು, ಟೊಮೆಟೊ ಹಾರ ಧರಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು.

See also  ಸೆ.13ರಂದು ತೆರೆಯಲಿದೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ, ಓಣಂ ಹಿನ್ನೆಲೆ ವಿಶೇಷ ಆರಾಧನೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget