ರಾಜ್ಯವೈರಲ್ ನ್ಯೂಸ್ಸಿನಿಮಾ

ರೈತನ ಟೊಮ್ಯಾಟೋ ತೋಟಕ್ಕೆ ಖ್ಯಾತ ನಟಿಯರೇ ಕಾವಲು..? ರಚಿತಾ ರಾಮ್​, ಸನ್ನಿ ಲಿಯೋನ್ ಟೊಮ್ಯಾಟೋ ತೋಟದಲ್ಲಿ…!

232

ನ್ಯೂಸ್ ನಾಟೌಟ್: ತೋಟದಲ್ಲಿ ಬೆಳೆಗಳನ್ನು ಕದಿಯದಂತೆ ಮತ್ತು ದೃಷ್ಠಿಯಾಗದಂತೆ ಜನರಿದ್ದಾರೆ ಎಂದು ತೋರಿಸಲು ಬೆದರುಗೊಂಬೆಗಳನ್ನು ಇಡುವುದು ಸಾಮಾನ್ಯ, ಆದರೆ ರಸ್ತೆ ಬದಿಯಲ್ಲಿರೋ ಟೊಮ್ಯಾಟೋ ತೋಟದಲ್ಲಿ ರೈತ ನಟಿಯರ ಫೋಟೋ ಹಾಕಿಸಿದ್ದಾರೆ. (farmer)

ಟೊಮ್ಯಾಟೋ ತೋಟಕ್ಕೆ ದೃಷ್ಠಿ ಆಗಬಾರದು ಎಂದು ದೃಷ್ಠಿ ಬೊಂಬೆಯಾಗಿ ನಟಿಯರ ಫೋಟೋವನ್ನು ರೈತ ಕಟ್ಟಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ದೀಪು ಎಂಬುವವರಿಗೆ ಸೇರಿದ ಟೊಮ್ಯಾಟೋ ತೋಟದಲ್ಲಿ ನಟಿ ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋವನ್ನು ಹಾಕಿದ್ದಾರೆ. ಆ ಮೂಲಕ ಬೆಳೆ ಚೆನ್ನಾಗಿ ಬರಲಿ ಎಂದು ವಿನೂತನ ಪ್ರಯತ್ನ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ , ಸನ್ನಿ ಲಿಯೋನ್ ಫ್ಲೆಕ್ಸ್ ನ್ನು ಬೆದರು ಬೊಂಬೆಯಾಗಿ ಬಳಕೆ ಮಾಡಿರುವುದು ಹಲವರ ಗಮನ ಸೆಳೆದಿದೆ. ಜನರ‌ ದೃಷ್ಟಿ ಗಿಡಗಳ ಬದಲು ನಟಿಯರ ಫೋಟೋ ಹಾಕಿದ್ದೇವೆ ಎಂದು ರೈತ ಹೇಳಿದ್ದು, ತೋಟದ ಸುತ್ತಲೂ ನಟಿಯರ ಪ್ಲೆಕ್ಸ್ ಬಳಕೆ ಮಾಡಿದ್ದಾರೆ. ಈಗ ಎಲ್ಲರೂ ನಟಿಯರ ಫೋಟೋ ನೋಡಿಕೊಂಡು ಹೋಗುತ್ತಿದ್ದಾರೆ. ನಮ್ಮ ತೋಟದ ಬೆಳೆಯ ಕಡೆ ಯಾರು ನೋಡ್ತಿಲ್ಲ, ಉತ್ತಮ ಬೆಳೆ ಸಿಗುವ ನಂಬಿಕೆ ಇದೆ ಎಂದು ರೈತ ತಿಳಿಸಿದ್ದಾರೆ.

ಈ ಹಿಂದೆ ರಾಯಚೂರು, ಕೊಪ್ಪಳ, ಶಿವಮೊಗ್ಗ ಭಾಗದ ರೈತರು ಭತ್ತದ ಬೆಳೆಗೆ ದೃಷ್ಟಿಯಾಗದಿರಲಿ ಎಂದು ಗದ್ದೆಯ ಬದುಗಳಲ್ಲಿ ನಟಿ ಸನ್ನಿ ಲಿಯೋನ್ ಸೇರಿದಂತೆ ಹಲವರ ಬ್ಯಾನರ್ ಗಳನ್ನು ಹಾಕಿದ್ದರು. ಇದೀಗ ಇಂತಹದ್ದೇ ಪ್ರಯೋಗಕ್ಕೆ ಚಿಕ್ಕಬಳ್ಳಾಪುರದ ರೈತ ಮುಂದಾಗಿದ್ದಾರೆ.

Click 👇

https://newsnotout.com/2024/07/politician-nomore-kannada-news-viral-video-west-bengal/
See also  ಯಾರೂ ವಾಸವಿಲ್ಲದ ಮನೆಯ ಫ್ರಿಡ್ಜ್ ​ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ..! 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget