ಕರಾವಳಿವಾಣಿಜ್ಯ

ಶೀಘ್ರದಲ್ಲೇ ಟೊಮೆಟೊ ಬೆಲೆ 300ಕ್ಕೇ ಏರಿಕೆ!? ಬೆಲೆ ಏರಿಕೆಯ ರಹಸ್ಯ ಬಹಿರಂಗಪಡಿಸಿದ ಸಗಟು ವ್ಯಾಪಾರಸ್ಥರು! ಇದಕ್ಕೆ ಕಾರಣವೇನು?

231

ನ್ಯೂಸ್ ನಾಟೌಟ್ : ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಬೆಲೆ ಗಗನಕ್ಕೇರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಕಿಲೋ ಟೊಮೆಟೊ ಬೆಲೆ ಈಗಾಗಲೇ 200 ರೂ ದಾಟುತ್ತಿದೆ. ಇನ್ನು ಚಿಲ್ಲರೆ ವಿಚಾರಕ್ಕೆ ಬಂದರೆ ಒಂದು ಕಿಲೋ ಟೊಮೆಟೊ ಬೆಲೆ 250 ರೂಗಿಂತಲೂ ಹೆಚ್ಚಿದೆ. ಸದ್ಯದಲ್ಲೇ ಒಂದು ಕಿಲೋ ಟೊಮೆಟೊ ಬೆಲೆ 300 ರೂ.ಗೆ ತಲುಪುವ ನಿರೀಕ್ಷೆ ಇದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.

ಟೊಮೆಟೊ ಖರೀದಿಸಬೇಕೆಂದರೆ ಜನಸಾಮಾನ್ಯರು ಹಲವು ಭಾರಿ ಯೋಚನೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಸದ್ಯಕ್ಕೆ ಟೊಮೆಟೊ ಬೆಲೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಆಗಸ್ಟ್ ಅಂತ್ಯದವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ. ಹೊಸ ಬೆಳೆ ಬರದ ಹೊರತು ಟೊಮೆಟೊ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಜೂನ್ ತಿಂಗಳಿನಿಂದ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದು ಗೊತ್ತೇ ಇದೆ. ಮೇ ತಿಂಗಳಲ್ಲಿ ಒಂದು ಕಿಲೋ ಟೊಮೆಟೊ ಕೇವಲ 40 ರೂ ಇತ್ತು. ಆದರೆ ಜೂನ್‌ನಿಂದ ಟೊಮೆಟೊ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಕೆಜಿಗೆ 100 ರೂ. ದಾಟಿದಾಗಲೇ ಗ್ರಾಹಕರು ಔಹಾರಿದ್ದರು. ಆದರೆ ನಂತರ ಕೆಜಿಗೆ 200 ರೂ.ಗೆ ತಲುಪಿದೆ. ಚಿಲ್ಲರೆ ಮಾರುಕಟ್ಟೆ ಮಾತ್ರವಲ್ಲದೆ ಸಗಟು ಮಾರುಕಟ್ಟೆಯಲ್ಲೂ ಒಂದು ಕಿಲೋ ಟೊಮೆಟೊ 200ರ ಗಡಿ ಮುಟ್ಟಿದೆ. ಜೂನ್ ತಿಂಗಳಿನಿಂದ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದು ಗೊತ್ತೇ ಇದೆ. ಮೇ ತಿಂಗಳಲ್ಲಿ ಒಂದು ಕಿಲೋ ಟೊಮೆಟೊ ಕೇವಲ 40 ರೂ ಇತ್ತು. ಆದರೆ ಜೂನ್‌ನಿಂದ ಟೊಮೆಟೊ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೆಜಿಗೆ 100 ರೂ. ದಾಟಿದಾಗಲೇ ಗ್ರಾಹಕರು ಔಹಾರಿದ್ದರು. ಆದರೆ ನಂತರ ಕೆಜಿಗೆ 200 ರೂ.ಗೆ ತಲುಪಿದೆ. ಚಿಲ್ಲರೆ ಮಾರುಕಟ್ಟೆ ಮಾತ್ರವಲ್ಲದೆ ಸಗಟು ಮಾರುಕಟ್ಟೆಯಲ್ಲೂ ಒಂದು ಕಿಲೋ ಟೊಮೆಟೊ 200ರ ಗಡಿ ಮುಟ್ಟಿದೆ.

ಸದ್ಯ ಟೊಮೆಟೊ ಕೆಜಿಗೆ ರೂ.160ರಿಂದ ರೂ.220ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಮದರ್​ ಡೈರಿಯು ಕಿಲೋ ಟೊಮೆಟೊ 259 ರೂಪಾಯಿಗೆ ಮಾಟಾಟ ಮಾಡಲು ಪ್ರಾರಂಭಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕಿಲೋ ಟೊಮೆಟೊ ಬೆಲೆ ರೂ.300ಕ್ಕೆ ತಲುಪುವುದು ಖಚಿತ.

ಹಿಮಾಚಲ ಪ್ರದೇಶ ಸೇರಿದಂತೆ ಪ್ರಮುಖ ಉತ್ಪಾದಕರ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಭೂಕುಸಿತ ಸಂಭವಿಸಿದೆ. ಹಾಗಾಗಿ ಟೊಮೆಟೊ ಸೇರಿದಂತೆ ತರಕಾರಿಗಳು ಮಾರುಕಟ್ಟೆಗೆ ಬರಲು ಅಡ್ಡಿಯಾಗಿದೆ.ಉತ್ತರ ಭಾರತದಲ್ಲಿ ಟೊಮೆಟೊ ಬೆಲೆ ಏರಿಕೆಗೆ ಇದೂ ಒಂದು ಕಾರಣ, ಮುಂದಿನ ದಿನಗಳಲ್ಲಿ ಕೆಜಿ ಟೊಮೆಟೊಗೆ 300 ರೂ ಆದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ಸಗಟು ವ್ಯಾಪಾರಿಗಳು.

See also  ಅಜ್ಜಾವರ : ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪಾರಾಧನೆ, ಭಕ್ತಾಭಿಮಾನಿಗಳಿಂದ ಸಂಪ್ರದಾಯಬದ್ಧ ಆಚರಣೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget