ಕೃಷಿ ಸಂಪತ್ತುಕ್ರೈಂ

1.5 ಎಕರೆ ಜಾಗದಲ್ಲಿದ್ದ ಟೊಮೆಟೋ ಗಿಡಗಳನ್ನು ಬುಡಸಮೇತ ಕತ್ತರಿಸಿದ ಕಿಡಿಗೇಡಿಗಳು..! ತೋಟದಲ್ಲೇ ಬಿದ್ದು ಅತ್ತ ರೈತನ ಕಣ್ಣೀರ ಕಥೆ..!

248

ನ್ಯೂಸ್‌ ನಾಟೌಟ್‌: ಜಮೀನಿನಲ್ಲಿ ಬೆಳೆದಿದ್ದ ಟೊಮೆಟೋ ಗಿಡಗಳನ್ನು ಬುಡ ಸಮೇತ ಕತ್ತರಿಸಿ, ಕಿಡಿಗೇಡಿಗಳು ಫಸಲು ನಾಶ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ. ಕೆಬ್ಬೇಪುರ ಗ್ರಾಮದ ಮಂಜು ಎಂಬುವರು ಸುಮಾರು 1.5 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದು, ನಿನ್ನೆ ಮೊದಲ ಫಸಲನ್ನು ಕೊಯ್ದು ಮಾರುಕಟ್ಟೆಗೆ ಕೊಟ್ಟು ಸಂತಸದಿಂದ ಇದ್ದರು.

ಆದರೆ ನಿನ್ನೆ(ಬುಧವಾರ) ರಾತ್ರಿ ಯಾರೋ ಕಿಡಿಗೇಡಿಗಳು ಟೊಮೆಟೋ ಬೆಳೆಗೆ ದಾಳಿ ಮಾಡಿ ಗಿಡಗಳನ್ನು ನೆಲದ ಸಮಕ್ಕೆ ಕತ್ತರಿಸಿ ಹಾಳು ಮಾಡಿದ್ದಾರೆ. ಕೆಲವು ಗಿಡಗಳಿಗೆ ಕಟ್ಟಿದ್ದ ತಂತಿಯನ್ನು ಕಿತ್ತುಹಾಕಿ ನೆಲಸಮ ಮಾಡಿ ಬೆಳೆ ನಾಶಗೊಳಿಸಿದ್ದಾರೆ. ಇದರಿಂದ ಕಂಗಾಲಾದ ರೈತ ತೋಟದಲ್ಲೇ ಬಿದ್ದು ಅಳುವ ದೃಶ್ಯ ಅಲ್ಲಿದ್ದವರ ಮನಕಲಕಿತು.

ಜಮೀನು ಮಾಲೀಕ ಮಂಜು 1.5 ಎಕರೆ ಜಮೀನಿನಲ್ಲಿ ಟೊಮೆಟೋ ಗಿಡ ಹಾಕಲು ಸುಮಾರು 1 ಲಕ್ಷ ರೂ ಗಿಂತ ಹೆಚ್ಚು ಖರ್ಚು ಮಾಡಿದ್ದರು. ಆದರೆ ಫಸಲಿಗೆ ಬಂದಿದ್ದ ಟೊಮೊಟೋ ಬೆಳೆಗಳ ನಾಶವಾಗಿರುವುದರಿಂದ ಅಂದಾಜು 10 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗುತ್ತಿದೆ.
ಇನ್ನೂ ಕೋಯ್ಲಿಗೆ ಬಂದಿದ್ದ ಟೊಮೆಟೋ ಬೆಳೆ ನಾಶವಾಗಿರುವುದರಿಂದ ರೈತ ಮಂಜು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಬೇಗೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

See also  4 ವರ್ಷದ ಮಗು ಬಿಡಿಸಿದ ಚಿತ್ರದಿಂದ ಬಯಲಾಯ್ತು ಕೊಲೆ ರಹಸ್ಯ..! ಅಮ್ಮನನ್ನು ಕೊಂದ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ ಮಗಳು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget