ಕ್ರೀಡೆ/ಸಿನಿಮಾ

ಟೋಕಿಯೋ ಪ್ಯಾರಾಲಿಂಪಿಕ್ಸ್: ಮಹಿಳೆಯರ 10 ಮೀ.ಶೂಟಿಂಗ್ ನಲ್ಲಿ ಅವನಿ ಲೇಖರಗೆ ಚಿನ್ನ

ಟೋಕಿಯೋ: ಈ ಬಾರಿಯ ಪ್ಯಾರಲಿಂಪಿಕ್ ನಲ್ಲಿ ಸಹ ಭಾರತ ಇತಿಹಾಸ ಸೃಷ್ಟಿಸಿದೆ. ಇಂದು ಬೆಳಗ್ಗೆ ಮುಗಿದ ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ ಎಚ್ 1 ಸ್ಪರ್ಧೆಯಲ್ಲಿ 19 ವರ್ಷದ ಅವನಿ ಲೆಖರ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಪ್ಯಾರಲಿಂಪಿಕ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ಯಾರಲಿಂಪಿಕ್ ನಲ್ಲಿ ಇದುವರೆಗೆ ಚಿನ್ನ ಗೆದ್ದ ಭಾರತೀಯ ಆಟಗಾರರಲ್ಲಿ ಅವನಿ ಲೆಖರಿ ನಾಲ್ಕನೆಯವರಾಗಿದ್ದಾರೆ. 19 ವರ್ಷದ ಅವನಿ ಒಟ್ಟು 249.6 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದಿನ ಪ್ಯಾರಲಿಂಪಿಕ್ ನಲ್ಲಿ ಭಾರತದ ಕ್ರೀಡಾಪಟುಗಳಾದ ಈಜುಗಾರ ಮುರಳಿಕಾಂತ್ ಪೆಟ್ಕರ್(1972ರಲ್ಲಿ), ಜಾವೆಲಿನ್ ಥ್ರೋವರ್ ದೇವೇಂದ್ರ ಜಾಜರಿಯಾ(2004 ಮತ್ತು 2016ರಲ್ಲಿ) ಮತ್ತು ಹೈಜಂಪ್ ನಲ್ಲಿ 2016ರಲ್ಲಿ ತಂಗವೇಲು ಮರಿಯಪ್ಪನ್ ಚಿನ್ನದ ಪದಕ ಗಳಿಸಿದ್ದರು.

Related posts

ನಟಿ ಸಾಯಿಪಲ್ಲವಿಗೆ ದಿಢೀರ್ ಮದುವೆ,ಪಡ್ಡೆ ಹುಡುಗರು ಶಾಕ್ ..!ಸೈಲೆಂಟಾಗಿ ಖ್ಯಾತ ನಿರ್ದೇಶಕನನ್ನು ಮದುವೆಯಾಗಿದ್ದೇಕೆ?

ಕೊನೆಗೂ ಕನ್ನಡಿಗರ ಒಗ್ಗಟ್ಟಿಗೆ ಮಣಿದ ರಶ್ಮಿಕಾ! ರಿಷಬ್,ರಕ್ಷಿತ್ ರನ್ನು ಹಾಡಿ ಹೊಗಳಿದ ಕೊಡಗಿನ ಚೆಲ್ವೆ,ಕೆಟ್ಟ ಮೇಲೆ ಬುದ್ದಿ ಬಂತಾ?

ಜೈಲಿಂದ ಹೊರಗಡೆ ಬಂದ ಬಳಿಕ ಮೊದಲ ಸಂಕ್ರಾತಿ ಹಬ್ಬ ಆಚರಿಸಿದ ನಟ ದರ್ಶನ್,ಪತ್ನಿ ವಿಜಯಲಕ್ಷ್ಮಿ ಜತೆ ಫಾರಂ ಹೌಸ್​ನಲ್ಲಿ ಪ್ರಾಣಿಗಳ ಆರೈಕೆ ಮಾಡಿದ ಡಿ.ಬಾಸ್