ನ್ಯೂಸ್ ನಾಟೌಟ್ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ವಿಶಿಷ್ಟವಾದ ಆದಾಯದ ಮೂಲವನ್ನು ಬಹಿರಂಗಪಡಿಸಿದ್ದಾರೆ. ಖಾಸಗಿ ವಾಹಿನಿ ಒಂದರ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿರುವ ಅವರು.. ತಮ್ಮ ಸಂಸದೀಯ ಕ್ಷೇತ್ರ ನಾಗ್ಪುರವನ್ನು ಉಲ್ಲೇಖಿಸಿ ವಾರ್ಷಿಕವಾಗಿ 300 ಕೋಟಿ ರೂಪಾಯಿ ಆದಾಯವನ್ನು ಶೌಚಾಲಯದ ನೀರಿನ ಮರುಬಳಕೆಯಿಂದ ಪಡೆಯುತ್ತೇವೆ ಎಂದಿದ್ದಾರೆ.
ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಉತ್ತರ ಪ್ರದೇಶದ ಮಥುರಾದಲ್ಲಿ ಒಂದು ತ್ಯಾಜ್ಯ ನೀರಾವರಿ ಯೋಜನೆ ಪ್ರಾರಂಭಿಸಿದ್ದೆ. ಇದರಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮಥುರಾ ಸಂಸ್ಕರಣಾಗಾರಕ್ಕೆ ಮಾರಾಟ ಮಾಡಲಾಯಿತು. ಇದಕ್ಕೆ ಸರ್ಕಾರ 40% ಮತ್ತು ಖಾಸಗಿ ಹೂಡಿಕೆದಾರರು 60% ಬಂಡವಾಳ ಹಾಕಿದ್ದಾರೆ. ಮೊದಲ ಬಾರಿಗೆ ಆರಂಭಿಸಿದ ಈ ದ್ರವ ತ್ಯಾಜ್ಯ ನಿರ್ವಹಣೆ ಪ್ಲಾನ್ ಸಾಕಷ್ಟು ಯಶಸ್ವಿಯಾಯಿತು ಎಂದರು.
ಅದೇ ರೀತಿ, ನಾಗ್ಪುರ ಮಹಾನಗರ ಪಾಲಿಕೆಯಲ್ಲಿ ಶೌಚಾಲಯದ ನೀರನ್ನು ಮಾರಾಟ ಮಾಡಲಾಗುತ್ತಿದೆ. ಯಾರೂ ಇದನ್ನು ನಂಬಲ್ಲ. ಆದರೆ ನಾವು ಶೌಚಾಲಯದ ನೀರನ್ನು ಮಾರಾಟ ಮಾಡುವ ಮೂಲಕ ವರ್ಷಕ್ಕೆ 300 ಕೋಟಿ ರೂಗಳಿಸ್ತೇವೆ.
ದೇಶದ ಪ್ರತಿಯೊಂದು ನಗರದಲ್ಲಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ ಬಳಸಿದರೆ, ಘನತ್ಯಾಜ್ಯ ನಿರ್ವಹಣೆ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಉತ್ತಮ ನೀತಿ ರೂಪುಗೊಳ್ಳುತ್ತದೆ. ಅದನ್ನು ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ್ದ ಪತಿ ಅರೆಸ್ಟ್..! ಬಾಡಿಗೆ ಮನೆಯಲ್ಲಿದ್ದವರ ಭೀಕರ ಕ್ರೈಂ ಕಹಾನಿ..!