ಕರಾವಳಿಸುಳ್ಯ

ಗಾಢನಿದ್ದೆಯಲ್ಲಿದ್ದಾಗಲೇ ಮೈ ಮೇಲೆ ಬಿದ್ದ ಬೆಡ್, 2 ವರ್ಷ ಪ್ರಾಯದ ಪುಟ್ಟ ಬಾಲಕ ದುರಂತ ಅಂತ್ಯ

158

ನ್ಯೂಸ್ ನಾಟೌಟ್ : ಪುಟ್ಟ ಬಾಲಕನೋರ್ವ ಗಾಢ ನಿದ್ದೆಯಲ್ಲಿದ್ದ ವೇಳೆ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದು ಆತ ಕೊನೆಯುಸಿರೆಳೆದ ಘಟನೆ ಕೇರಳದ (Kerala) ಕೋಯಿಕ್ಕೋಡ್‍ನಲ್ಲಿ ನಡೆದಿದೆ.

ಜೆಫಿನ್ ಸಂದೀಪ್ (2) ದುರಂತ ಅಂತ್ಯಕ್ಕೀಡಾದ ಬಾಲಕ. ಈತ ಸಂದೀಪ್ ಹಾಗೂ ಜಿನ್ಸಿ ದಂಪತಿಯ ಪುತ್ರ. ಈ ಘಟನೆ ಗುರುವಾರ ಸಂಜೆ 7 ಗಂಟೆಗೆ ನಡೆದಿದೆ ಎಂದು ತಿಳಿದು ಬಂದಿದೆ.

ಅಂದು ಸಂಜೆ ವೇಳೆಗೆ ಬಾಲಕ ಬೇಗ ಮಲಗಿದ್ದ. ಈ ವೇಳೆ ೭ ಗಂಟೆ ಸುಮಾರಿಗೆ ಗಾಢ ನಿದ್ರೆಗೆ ಜಾರಿದ್ದ.ಈ ಸಂದರ್ಭದಲ್ಲಿ ರ್ಯಾಕ್‍ನಲ್ಲಿಟ್ಟ ಬೆಡ್ ಆತನ ಮೈಮೇಲೆ ಬಿದ್ದಿದೆ.

ಇತ್ತ ಬೆಡ್ ಬಾಲಕನ ಮೇಲೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.  

See also  ಸುಳ್ಯದ ಸಂತ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ಡಿಂಡಿಮ..! ಗಮನ ಸೆಳೆದ ವಿದ್ಯಾರ್ಥಿಗಳೇ ರಚಿಸಿದ ಕರ್ನಾಟಕದ ನಕ್ಷೆ ಇಲ್ಲಿದೆ ನೋಡಿ..
  Ad Widget   Ad Widget   Ad Widget   Ad Widget   Ad Widget   Ad Widget   Ad Widget