Uncategorized

ಇಂದಿನಿಂದ ಟಿ20 ಕ್ರಿಕೆಟ್ ವಿಶ್ವಕಪ್: ಭಾರತ-ಪಾಕ್ ಪಂದ್ಯದತ್ತ ಎಲ್ಲರ ಚಿತ್ತ

ನ್ಯೂಸ್ ನಾಟೌಟ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಶನಿವಾರದಿಂದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತ ಆರಂಭವಾಗಲಿದೆ. 

ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ತಂಡವು ನ್ಯೂಜಿಲೆಂಡ್ ಎದುರು ಸೆಣಸಲಿದೆ. ಇದೇ ದಿನ ಪರ್ತ್‌ನಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಅ.17ರಿಂದ ಆರಂಭವಾಗಿದ್ದ ಅರ್ಹತಾ ಸುತ್ತಿನಲ್ಲಿ ಪ್ರಮುಖ ತಂಡವಾದ ವೆಸ್ಟ್ ಇಂಡೀಸ್ ನಿರಾಶೆ ಅನುಭವಿಸಿದೆ. ಜಿಂಬಾಬ್ವೆ ಇದೇ ಮೊದಲ ಬಾರಿಗೆ ಮುಖ್ಯಸುತ್ತಿಗೆ ಪ್ರವೇಶಿಸಿದೆ.  

ಒಟ್ಟು ಏಳು ನಗರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ. ಭಾರತ ತಂಡವು ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. 

Related posts

ಮೇಕಪ್ ಎಫೆಕ್ಟ್ :ಮುಖ ವಿಕಾರ,ಆಸ್ಪತ್ರೆ ಸೇರಿದ ವಧು!,ಮದುವೆ ಕ್ಯಾನ್ಸಲ್ ಮಾಡಿದ ವರ

ಸುಳ್ಯ: ಕೆವಿಜಿ ಕಾನೂನು ಮಹಾವಿದ್ಯಾಲಯದ 34ನೇ ವರ್ಷದ ವಾರ್ಷಿಕೋತ್ಸವ

ಡಿಸಿಎಂ ವೇದಿಕೆಗೆ ಬರುತ್ತಿದ್ದಂತೆ ‘ಜೈ ಶ್ರೀರಾಮ’ ಘೋಷಣೆ..!ಯುವಕರ ಗುಂಪಿಗೆ ಡಿಕೆಶಿ ಹೇಳಿದ್ದೇನು?