ಕರಾವಳಿಸುಳ್ಯ

ಇಂದು ಚಾಲೆಂಜಿಂಗ್ ಸ್ಟಾರ್ ಬರ್ತ್‌ಡೇ ಸಂಭ್ರಮ;ಅಂಗನವಾಡಿ ಮಕ್ಕಳಿಗೆ ಪುಸ್ತಕ,ಪೆನ್ಸಿಲ್, ಸಿಹಿ ತಿಂಡಿ ವಿತರಣೆ

240

ನ್ಯೂಸ್‌ ನಾಟೌಟ್‌: ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ಸಂಭ್ರಮ.ನೆಚ್ಚಿನ ನಟನಿಗೆ ಅವರ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.ಇನ್ನೂ ಕೆಲವು ಅಭಿಮಾನಿಗಳು ಹುಟ್ಟು ಹಬ್ಬದ ಪ್ರಯುಕ್ತ ಸಿಹಿ ಹಂಚಿ ಸಂಭ್ರಮ ಪಟ್ಟರು.ಇದೀಗ ಸುಳ್ಯ ತಾಲೂಕು ಡಿ ಬಾಸ್ ಅಪ್ಪಟ ಅಭಿಮಾನಿಗಳಾದ ಜಗ್ಗೇಶ್ ಸಂಕೇಶ ಹಾಗೂ ಡಿ ಬಾಸ್ ಗಜಪಡೆ ಸಂಕೇಶ ಇವರ ವತಿಯಿಂದ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬದ ಪ್ರಯುಕ್ತ ಕುಕ್ಕುಜಡ್ಕ ಅಂಗನವಾಡಿ ಮಕ್ಕಳಿಗೆ ಪುಸ್ತಕ / ಪೆನ್ಸಿಲ್ ಹಾಗೂ ಸಿಹಿ ಹಂಚಿ ಸಂಭ್ರಮ ಪಟ್ಟರು.

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಹಾಗೂ ಸಹಾಯಕಿ ನೇತ್ರಾವತಿ ಅಭಿಮಾನಿ ಬಳಗದೊಂದಿಗೆ ಸಹಕರಿಸಿದರು.ಇದೇ ಸಂದರ್ಭದಲ್ಲಿ ಅಮರ ಮುಡ್ನೂರು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೂ ಸಿಹಿ ಹಂಚಲಾಯಿತು.ಸಂಕೇಶ ಕಾಲೋನಿಯ ಜನರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.ಅಭಿಮಾನಿಗಳು ಕಳೆದ ವರ್ಷವೂ ಕೂಡ ಇದೆ ರೀತಿ ಅಭಿಮಾನ ತೋರಿದ್ದರು.

ಡಿ ಬಾಸ್ ಗಜಪಡೆ ಎಂಬ ಅಭಿಮಾನಿ ಬಳಗದೊಂದಿಗೆ ಜಗ್ಗೇಶ್ , ಸಂಕೇಶ,ಯಕ್ಷಿತ್ ಕಮಿಲ,ಇಂದ್ರೇಶ್ ಸಂಕೇಶ,ವಿನೋದ್ ಪೈಲೂರು, ಕೀರ್ತನ್ ಸಂಕೇಶ, ಮೋಕ್ಷಿತ್ ಬೋಳಿಯಮೂಲೆ, ನವನೀತ್ ಬೋಳಿಯಮೂಲೆ, ಹರ್ಷಿತ್ ಬೋಳಿಯಮೂಲೆ, ತೀರ್ಥೇಶ್ ಬೋಳಿಯಮೂಲೆ, ಸುಜಿತ್ ಬೋಳಿಯಮೂಲೆ,ಜಾಹ್ನವಿ ಸಂಕೇಶ,ಲಿಕ್ಷಿತಾ ಸಂಕೇಶ, ಪವಿತ್ರ ಸಂಕೇಶ,ಧನ್ಯ ವಿನೋದ್ ಪೈಲೂರು,ಸತೀಶ್ ಅಡ್ಕಾರ್ ಮುಂತಾದವರು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.

See also  ಭಜರಂಗಿಯ ಕಾಲಿಗೆ ಶಿರ ಭಾಗಿ ಎರಗಿ ಕ್ಷಮೆ ಕೇಳಿದರೇ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget