ಕ್ರೈಂವೈರಲ್ ನ್ಯೂಸ್

ಟೈಟಾನಿಕ್ ಸಬ್‌ಮೆರಿನ್ ದುರಂತ! ಅವಶೇಷಗಳನ್ನು ತೀರಕ್ಕೆ ಎಳೆದು ತಂದ ರಕ್ಷಣಾ ತಂಡ! ಫೋಟೋ ಬಿಡುಗಡೆಗೊಳಿಸಿದ ಅಸೋಸಿಯೇಟೆಡ್ ಪ್ರೆಸ್

ನ್ಯೂಸ್ ನಾಟೌಟ್‌: ಟೈಟಾನಿಕ್ (titanic) ಅವಶೇಷಗಳ ನೋಡಲು ಐವರು ಪ್ರವಾಸಿಗರನ್ನು ಹೊತ್ತೊಯ್ದು ಬಳಿಕ ನಾಪತ್ತೆಯಾದ ಸಬ್‌ ಮೆರಿನ್‌ನ ಅವಶೇಷಗಳು ರಕ್ಷಣಾ ತಂಡಕ್ಕೆ ಸಿಕ್ಕಿದ್ದು, ಅದನ್ನು ಸಮುದ್ರ ತೀರಕ್ಕೆ ಎಳೆದು ತರಲಾಗಿದೆ. ಅದರ ಮೊದಲ ಫೋಟೋಗಳನ್ನು ಅಸೋಸಿಯೇಟೆಡ್ ಪ್ರೆಸ್ ಬಿಡುಗಡೆ ಮಾಡಿದೆ.
ಈ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಸಮುದ್ರದಾಳದಲ್ಲಿರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ದಿತ್ತು. ಆದರೆ ಅಟ್ಲಾಂಟಿಕಾದ ಸಮುದ್ರ ತೀರದಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿಯೇ ಈ ನೌಕೆ ಸಂಪರ್ಕ ಕಳೆದುಕೊಂಡಿತ್ತು. ಇದಾದ ಬಳಿಕ ಕೆನಡಾ, ಅಮೆರಿಕಾ, ಬ್ರಿಟನ್ ದೇಶಗಳ ರಕ್ಷಣಾ ತಂಡಗಳು ಈ ಐವರಿಗೆ ತೀವ್ರ ಶೋಧ ನಡೆಸಿದ್ದರು. ಆದರೂ ಅವರು ಪತ್ತೆಯಾಗಿರಲಿಲ್ಲ. ನಂತರದಲ್ಲಿ ಸಬ್‌ಮೆರಿನ್‌ನ ಅವಶೇಷ ಪತ್ತೆಯಾಗಿದ್ದು, ಅದನ್ನೀಗ ರಕ್ಷಣಾ ತಂಡ ಸಾಗರದಿಂದ ಸಮುದ್ರ ತೀರಕ್ಕೆ ತಂದಿಳಿಸಿದೆ ಎಂದು ವರದಿ ತಿಳಿಸಿದೆ.

ಕಳೆದ ವಾರ ಐವರು ಪ್ರವಾಸಿಗರನ್ನು ಹೊತ್ತೊಯ್ದ ಈ ಪುಟ್ಟ ಸಬ್‌ಮೆರ್ಸಿಬಲ್‌ (ಸಬ್‌ಮೆರಿನ್) ನಾಪತ್ತೆಯಾದ ನಂತರ ಅವರ ಪತ್ತೆಗಾಗಿ ದೊಡ್ಡಮಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಈ ಪುಟ್ಟ ಜಲಾಂತರ್ಗಾಮಿಯಲ್ಲಿ ಬ್ರಿಟನ್‌ನ ಉದ್ಯಮಿ ಸಾಹಸಿ ಹಮಿಶ್ ಹಾರ್ಡಿಂಗ್, ಟೈಟಾನಿಕ್ ತಜ್ಞ ಹಾಗೂ ಫ್ರಾನ್ಸ್‌ನ ಆಳ ಸಮುದ್ರ ಶೋಧಕ ಪೌಲ್-ಹೆನ್ರಿ ನರ್ಗೆಲೆಟ್, ಪಾಕಿಸ್ತಾನ ಮೂಲದ ಅತ್ಯಂತ ಶ್ರೀಮಂತ ಉದ್ಯಮಿ ಶಹಜಾದಾ ದಾವೂದ್, ದಾವೂದ್ ಪುತ್ರ ಸುಲೇಮಾನ್ ದಾವೂದ್ ಮತ್ತು ಓಷನ್‌ಗೇಟ್ ಸಿಇಒ ಸ್ಟಾಕ್‌ಟನ್ ರಶ್ ಈ ಪುಟ್ಟ ಸಬ್‌ಮೆರಿನ್‌ನಲ್ಲಿದ್ದರು.

ಅಮೆರಿಕಾದ ಕೋಸ್ಟ್ ಗಾರ್ಡ್ ಮತ್ತು ಇತರ ಸಂಸ್ಥೆಗಳ ಅತ್ಯುತ್ತಮ ಹುಡುಕಾಟ ಪ್ರಯತ್ನಗಳ ಹೊರತಾಗಿಯೂ, ಗುರುವಾರ ಜೂನ್ 22ರಂದು ಈ ಸಬ್‌ಮೆರಿನ್‌ನ ಶೋಧದ ಪ್ರದೇಶದಲ್ಲಿ ಅದರ ಅವಶೇಷಗಳು ಕಂಡುಬಂದಿದ್ದವು. ಹೀಗಾಗಿ ಟೈಟಾನ್ ಹೆಸರಿನ ಈ ನೌಕೆಯು ಸ್ಫೋಟಗೊಂಡಿದೆ ಹಾಗಾಗಿ ಹಡಗಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕೋಸ್ಟ್ ಗಾರ್ಡ್ ಘೋಷಣೆ ಮಾಡಿತ್ತು. ಸದ್ಯ ಈ ಟೈಟಾನ್ ಸಬ್‌ಮೆರಿನ್‌ನ ಅವಶೇಷಗಳನ್ನು ರಕ್ಷಣಾ ತಂಡ ಸಮುದ್ರದಿಂದ ಹೊರಗೆ ತೆಗೆದಿದ್ದು, ಅದರ ಫೋಟೋವನ್ನು ಬಿಡುಗಡೆಗೊಳಿಸಿದೆ.

Related posts

ಕಳ್ಳರನ್ನು ಬಂಧಿಸಲು ಹೊರಟ ಪೊಲೀಸರ ಮೇಲೆ ದಾಳಿ..! ಪೊಲೀಸ್‌ ಜೀಪ್‌ಗೆ ಕಲ್ಲು ತೂರಿ ಪರಾರಿಯಾದ ಖತರ್ನಾಕ್‌ ಗ್ಯಾಂಗ್

ಚೀನಾ ಸೂಪರ್‌ ಮಾರ್ಕೆಟ್‌ ನಲ್ಲಿ ಡಾ.ರಾಜ್‌ಕುಮಾರ್‌ ಅಭಿನಯದ ಗಂಧದ ಗುಡಿ ಚಿತ್ರದ ಹಾಡು..! ಏನಿದು ವೈರಲ್ ವಿಡಿಯೋ..?

ಈ ಸಂಸದೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದರಾ..? ಸುಪ್ರೀಂ ಕೋರ್ಟ್‌ ವಕೀಲ ನೀಡಿದ ದೂರಿನಲ್ಲೇನಿದೆ? ಇಂದು ವಿಚಾರಣೆಗೆ ಹಾಜರಾಗ್ತಾರಾ..?