ಭಕ್ತಿಭಾವ

ತಿರುಪತಿ ತಿಮ್ಮಪ್ಪನಿಗೆ 2022ರಲ್ಲಿ ಹರಿದು ಬಂದ ಹಣವೆಷ್ಟು ಗೊತ್ತಾ?

459

ನ್ಯೂಸ್ ನಾಟೌಟ್: ವಿಶ್ವದ ಶ್ರೀಮಂತ ದೇವಸ್ಥಾನ ತಿರುಪತಿಯ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ವರ್ಷದಿಂದ ವರ್ಷಕ್ಕೆ ಆದಾಯ ದ್ವಿಗುಣಗೊಳುತ್ತಿದೆ. ಇದೀಗ 2022ರಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ 1,451 ಕೋಟಿ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

2021ರಲ್ಲಿ ಕೊರೋನಾ ಕಾರಣದಿಂದ ಹಣದ ಮೊತ್ತದಲ್ಲಿ ಕುಸಿತ ಕಂಡಿತ್ತು. ಆದರೆ ಕೊರೋನಾ ಇಳಿಕೆ ಕಂಡ ಬಳಿಕ ಆದಾಯದ ಮೊತ್ತದಲ್ಲಿ ಹೆಚ್ಚಳವಾಗಿದೆ. ಅಂದರೆ 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ.74ರಷ್ಟು ಮೊತ್ತದಲ್ಲಿ ಹೆಚ್ಚಳವಾಗಿದೆ. ಸದ್ಯ ತಿರುಪತಿ ಲಡ್ಡು ಮಾರಾಟದಲ್ಲೂ ಭಾರಿ ಬೇಡಿಕೆ ಹೆಚ್ಚಾಗಿದೆ. 11.40 ಕೋಟಿ ತಿಮ್ಮಪ್ಪನ ಪ್ರಸಾದ ಲಡ್ಡುಗಳು ಮಾರಾಟವಾಗಿದೆ. ಸದ್ಯ ವೈಕುಂಠ ಏಕಾದಶಿ ಇರುವುದರಿಂದ ದೇಗುಲದಲ್ಲಿ ಭಕ್ತರಿಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

See also  ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget