ನ್ಯೂಸ್ ನಾಟೌಟ್: ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಪಡೆದಿರುವ ತಿರುಪತಿ ಲಡ್ಡುವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಆನ್ ಲೈನ್ ಮಾರಾಟ ಸಂಸ್ಥೆಗಳ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ನೋಟಿಸ್ ಜಾರಿಗೊಳಿಸಿದೆ.
ಪುಷ್ ಮೈ ಕಾರ್ಟ್ ಮತ್ತು ಟ್ರಾನ್ಸಾಕ್ಟ್ ಫುಡ್ಸ್ ಲಿ. ಸೇರಿ ಹಲವು ಸಂಸ್ಥೆಗಳಿಗೆ ನೋಟಿಸ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಸ್ಥೆಗಳು ತಮ್ಮ ಮಾರಾಟ ಉತ್ಪನ್ನಗಳ ಪಟ್ಟಿಯಿಂದ ತಿರುಪತಿ ಲಡ್ಡುವನ್ನು ಕೈ ಬಿಟ್ಟಿವೆ.
“ತಿರುಪತಿ ಲಡ್ಡು ಕೇವಲ ಒಂದು ಉತ್ಪನ್ನವಲ್ಲ. ಅದೊಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯ ಹೊಂದಿರುವ ಪವಿತ್ರ ಪ್ರಸಾದ’ ಎಂದು ಟಿಟಿಡಿ ಹೇಳಿದೆ.
ಈ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟ..! ಆರತಿ ಬೆಳಗಿ, ಪೂಜೆ ಸಲ್ಲಿಸಿ ಬೀಳ್ಕೊಟ್ಟ ಮನೆಯವರು