ಭಕ್ತಿಭಾವ

ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಟೋಕನ್ ಇಲ್ಲದೆ ಶ್ರೀವಾರಿ ಸರ್ವದರ್ಶನ

487

ನ್ಯೂಸ್ ನಾಟೌಟ್: ತಿರುಪತಿ ತಿರುಮಲ ದೇವರ ದರ್ಶನವನ್ನು ಪಡೆಯಲು ರಾಜ್ಯದ ಸಾಕಷ್ಟು ಭಕ್ತಾದಿಗಳು ಆಗಮಿಸುತ್ತಿದ್ದಾರೆ.ಇಲ್ಲಿನ ದೇವರ ದರ್ಶನ ಪಡೆದು ಭಕ್ತಾದಿಗಳೆಲ್ಲ ಪುನೀತರಾಗುತ್ತಿದ್ದಾರೆ. ನಂಬಿದವನಿಗೆ ಇಂಬು ನೀಡುವ ತಿಮ್ಮಪ್ಪನ ದರ್ಶನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ತಿರುಮಲಕ್ಕೆ ಆಗಮಿಸಿ ಕಷ್ಟಗಳನ್ನು ದೂರ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ .ಶ್ರೀವಾರಿ ಸರ್ವದರ್ಶನಕ್ಕಾಗಿ 14 ಕಂಪಾರ್ಟ್ ಮೆಂಟ್ ಗಳಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಟೋಕನ್ ಇಲ್ಲದೆ ಭಕ್ತರಿಗೆ ಶ್ರೀಗಳ ದರ್ಶನಕ್ಕೆ 24 ಗಂಟೆಗಳ ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದೆ. ಡಿ.18 ರಂದು 75,611 ಶ್ರೀವಾರಿ ದರ್ಶನ ಪಡೆದರು. ಭಾನುವಾರದ ಹುಂಡಿಯಲ್ಲಿ 3.55 ಕೋಟಿ ರೂ. ಆದಾಯ ಬಂದಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

See also  ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ವೈಭವದ ಜಾತ್ರಾ ಮಹೋತ್ಸವ, ಧ್ವಜಾರೋಹಣದೊಂದಿಗೆ ಚಾಲನೆ,ಹರಿದು ಬರುತ್ತಿರುವ ಭಕ್ತಸಾಗರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget