ಕ್ರೈಂಬೆಂಗಳೂರು

ಮನೆ ಮುಂದೆ ಆಟವಾಡುತ್ತಿದ್ದ ಕಂದಮ್ಮಗಳ ಮೇಲೆ ಚಲಿಸಿದ ಟಿಪ್ಪರ್..! ಮುಂದೇನಾಯ್ತು..?

160

ನ್ಯೂಸ್‌ ನಾಟೌಟ್‌: ಟಿಪ್ಪರ್‌ ಚಾಲಕನೋರ್ವ ಅತೀ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಬಲಿ ಪಡೆದ ಘಟನೆ ಬೆಂಗಳೂರಿನ ಮೈಸೂರು ರಸ್ತೆ ಸಮೀಪ ಗುಡ್ಡದಹಳ್ಳಿ ಬಳಿ ಸಂಭವಿಸಿದೆ.

ಪುಟ್ಟ ಮಕ್ಕಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಮೇಲೆ ಕುಳಿತು ಆಟವಾಡುತ್ತಿದ್ದರು. ಈ ಸಂದರ್ಭ ಯಮನಂತೆ ಬಂದ ಟಿಪ್ಪರ್‌ ಇವರನ್ನು ನೆಲಕ್ಕೆ ಕೆಡವಿದೆ. ಮಕ್ಕಳ ಮೇಲೆ ಹರಿದು, ನಿಯಂತ್ರಣಕ್ಕೆ ಸಿಗದ ಟಿಪ್ಪರ್‌ ಐದಾರು ವಾಹನಗಳ ಮೇಲೆ ಹರಿದಿದೆ. ಹೋಲೋಬಾಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಶವಗಳನ್ನು ಆಂಬ್ಯುಲೆನ್ಸ್‌ಗೆ ಹಾಕಿ ಒಯ್ಯಲಾಗಿದೆ. ಅಪಘಾತದ ದಾರುಣತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಕುಣಿದಾಡಿದ್ದ ಮಕ್ಕಳು ಇಂದು ಶವವಾಗಿದ್ದು, ಇವರ ಕುಟುಂಬಗಳು ಶೋಕದ ಮಡುವಿನಲ್ಲಿವೆ.

See also  ಶಿಕ್ಷಕಿಯ ಮಗನಿಂದ ಲವ್ ಮಾಡುವಂತೆ ನಿರಂತರ ಕಿರುಕುಳ, SSLC ವಿದ್ಯಾರ್ಥಿನಿ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget