ಕ್ರೈಂ

ಸೋಣಂಗೇರಿ: ಟಿಪ್ಪರ್-ಬೈಕ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

ಸೋಣಂಗೇರಿ: ಇಲ್ಲಿನ ಸುತ್ತುಕೋಟೆ ಸಮೀಪ ಸಂಭವಿಸಿದ ಟಿಪ್ಪರ್- ಬೈಕ್ ಅಪಘಾತದಲ್ಲಿ ಬೈಕ್ ಸವಾರ ಜಖಂಗೊಂಡ ಘಟನೆ ನಡೆದಿದೆ.

ದುಗ್ಗಲಡ್ಕದ ಕಾರ್ ಬಾಡಿ ಶಾಪ್ ನ ಮಾಲಕ ಯತೀನ್ ದುಗ್ಗಲಡ್ಕದಿಂದ ಸುಳ್ಯದ ಕಡೆಗೆ ಬರುತ್ತಿದ್ದು,ಸುಳ್ಯ ಕಡೆಯಿಂದ ಹೋಗುತ್ತಿದ್ದ ಟಿಪ್ಪರ್ ಗೆ ಸೋಣಂಗೇರಿ ಸಮೀಪದ ಸುತ್ತುಕೋಟೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಯಿತು. ಪರಿಣಾಮವಾಗಿ ಯತೀನ್ ರವರ ಎಡ ಕೈ ಜಖಂಗೊಂಡು,ತಲೆ, ಮುಖದ ಭಾಗಕ್ಕೆ ಅಲ್ಪಸ್ವಲ್ಪ ಗಾಯವಾಗಿರುವುದಾಗಿ ತಿಳಿದುಬಂದಿದೆ.ಬೈಕ್ ಕೂಡ ಜಖಂಗೊಂಡಿದೆ. ಟಿಪ್ಪರ್ ರಾಂಗ್ ಸೈಡ್ ಬಂದದ್ದೆ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಗಾಯಾಳುವನ್ನು ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related posts

ಬಸ್ ಸ್ಟ್ಯಾಂಡ್‌ನಲ್ಲಿ ಮದ್ಯಪಾನ-ಮಸ್ತಿ, ಐವರು ಯುವಕರಿಗೆ ಪೊಲೀಸ್ ಕ್ಲಾಸ್‌

ಬಿ.ಸಿ.ರೋಡ್: ಬಾಲಕ ನಾಪತ್ತೆ ಪ್ರಕರಣಕ್ಕೆ ದುರಂತ ತಿರುವು! ಕೆರೆಯಲ್ಲಿ ಶವ ಪತ್ತೆ..!

ಮದ್ಯ ಅಕ್ರಮ ಮಾರಾಟ; ಓರ್ವ ವಶ