ವೈರಲ್ ನ್ಯೂಸ್

ತಿಮಿಂಗಿಲ ದೇಹದಲ್ಲಿ 9.5KG ‘ತೇಲುವ ಚಿನ್ನ’ ಪತ್ತೆ..! ಅಷ್ಟಕ್ಕೂ ‘ತೇಲುವ ಚಿನ್ನ’ ಎಂದರೇನು? ಇದರ ಬೆಲೆ ಎಷ್ಟು ಗೊತ್ತಾ?

ನ್ಯೂಸ್ ನಾಟೌಟ್: ಕಳೆದ ತಿಂಗಳು ಜೂನ್ ನಲ್ಲಿ ಕ್ಯಾನರಿ ದ್ವೀಪದ ಲಾ ಪಾಲ್ಮಾ ನೋಗಾಲ್ಸ್‌ ಬೀಚ್‌ನಲ್ಲಿ ಸಾವನ್ನಪ್ಪಿದ್ದ ‘ಸ್ಪರ್ಮ್‌ ತಿಮಿಂಗಿಲ’(ದೊಡ್ಡ ಹಲ್ಲುಗಳ ತಿಮಿಂಗಿಲ) ಕರುಳಿನಲ್ಲಿ ಅಡಗಿದ್ದ ಅಮೂಲ್ಯವಾದ ನಿಧಿಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಈ ತಿಮಿಂಗಲ ದೇಹದಲ್ಲಿ ತೇಲುವ ಚಿನ್ನ ಎಂದೇ ಖ್ಯಾತಿಯಾಗಿರುವ 9.5 ಕೆಜಿಗಳಷ್ಟು ಅಂಬರ್‌ ಗ್ರೀಸ್‌ ಪತ್ತೆಯಾಗಿದೆ. ಲಾಸ್ ಪಾಲ್ಮಾಸ್ ವಿಶ್ವವಿದ್ಯಾನಿಲಯದ ಲಾಸ್ ಪಾಲ್ಮಾಸ್ ವಿಶ್ವವಿದ್ಯಾನಿಲಯದ ಪ್ರಾಣಿಗಳ ಆರೋಗ್ಯ ಮತ್ತು ಆಹಾರ ಭದ್ರತೆಯ ಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಫೆರ್ನಾಂಡಿಸ್ ರೋಡ್ರಿಗಸ್ ಅವರು ಈ ತಿಮಿಂಗಿಲಿನ ಹಠಾತ್ ಸಾವಿನ ಕಾರಣ ತಿಳಿಯಲು ನಿರ್ಧರಿಸಿದ್ದರು. ಅದರಂತೆ ಅದರ ಮೃತದೇಹವನ್ನು ಪರೀಕ್ಷಿಸುವ ವೇಳೆ $250,000 ಮೌಲ್ಯದ ಅಮೂಲ್ಯ ನಿಧಿ ಪತ್ತೆಯಾಗಿದೆ.

ಸ್ಪರ್ಮ್‌ ತಿಮಿಂಗಿಲಿನ ಹೊಟ್ಟೆಯಲ್ಲಿ ಸಿಕ್ಕ 9.5 ಕೆಜಿ ಅಂಬರ್‌ ಗ್ರೀಸ್‌ ಅಂದರೆ ತಿಮಿಂಗಿಲ ವಾಂತಿಯ ಮೌಲ್ಯವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 3 ಕೋಟಿ ರೂ. ಆಗುತ್ತದೆ ಎಂದು ವರದಿಯಾಗಿದೆ. ಲಾಸ್‌ ಪ್ಲಾಮಾಸ್‌ ಡಿ ಗ್ರಾನ್‌ ಕೆನರಿಯಾ ವಿವಿಯ ತಜ್ಞರ ಮಾಹಿತಿಯಂತೆ, ಅಂಬರ್‌ ಗ್ರೀಸ್‌ ಎಂದು ಕರೆಯಲ್ಪಡುವ ಈ ವಾಂತಿಯು ಸುಮಾರು 10KG ಯಷ್ಟಿದ್ದು, ಇದು ಕರುಳಿನಲ್ಲಿ ಹುಣ್ಣಾಗಲು ಕಾರಣವಾಗಿದ್ದರಿಂದ ತಿಮಿಂಗಿಲ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಸಾವನ್ನಪ್ಪಿರುವ ಸ್ಪರ್ಮ್‌ ತಿಮಿಂಗಿಲ 33 ಅಡಿ ಉದ್ದವಿದ್ದು, 2 ಅಡಿ ಅಗಲವಾಗಿದೆ ಎಂದು ಹೇಳಲಾಗಿದೆ.

ಈ ವಸ್ತುವನ್ನು ವೀರ್ಯ ತಿಮಿಂಗಿಲದ ಕರುಳಿನಲ್ಲಿ ಪಿತ್ತರಸ ಸ್ರವಿಸುವ ಪಿತ್ತರಸ ನಾಳದಿಂದ ರಚಿಸಲಾಗಿದೆ, ಮತ್ತು ಇದು ಆಗಾಗ್ಗೆ ನೀರಿನ ಮೇಲೆ ತೇಲುತ್ತಿರುವ ಅಥವಾ ಕರಾವಳಿಯಲ್ಲಿ ತೊಳೆಯುವುದು ಕಂಡುಬರುತ್ತದೆ. ಸತ್ತ ವೀರ್ಯ ತಿಮಿಂಗಿಲಗಳ ಹೊಟ್ಟೆಯಲ್ಲಿ ಅಂಬರ್ಗ್ರಿಸ್ ಅನ್ನು ಕಾಣಬಹುದು.
ಸ್ಪರ್ಮ್‌ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆ ಇದೆ. ಈ ಅಂಬರ್‌ ಗ್ರೀಸ್‍ಗೆ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಸುಗಂಧ ದ್ರವ್ಯ ತಯಾರಿಕೆಯ ಉದ್ಯಮದಲ್ಲಿ ಭಾರೀ ಬೇಡಿಕೆಯಿದೆ. ಸ್ಪರ್ಮ್‌ ತಿಮಿಂಗಿಲದ ದೇಹದೊಳಗೆ ಈ ಅಂಬರ್‌ ಗ್ರೀಸ್‌ ಹೇಗೆ ಉತ್ಪತ್ತಿಯಾಗುತ್ತದೆ ಅನ್ನೋದು ಇದುವರೆಗೂ ವಿಜ್ಞಾನಿಗಳಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ ತಿಮಿಂಗಿಲ ಕೆಲವು ಜಲಚರವನ್ನು ತಿಂದ ಬಳಿಕ ಅಂಬರ್‌ ಗ್ರೀಸ್‌ ಅದರ ಹೊಟ್ಟೆಯೊಳಗೆ ಸೃಷ್ಟಿಯಾಗುತ್ತದೆ ಎಂಬ ನಂಬಿಕೆಯಿದೆ.

‘ನಾನು ತೆಗೆದದ್ದು ಸುಮಾರು 50-60 ಸೆಂ.ಮೀ ವ್ಯಾಸದ 9.5 ಕೆಜಿ ತೂಕದ ಫ್ಲೋಟಿಂಗ್‌ ಗೋಲ್ಡ್. ಅಲೆಗಳು ತಿಮಿಂಗಿಲದ ಮೇಲೆ ಕೊಚ್ಚಿಕೊಂಡು ಹೋಗುತ್ತಿದ್ದವು. ನಾನು ಬೀಚ್‌ ತಲುಪಿದಾಗ ಎಲ್ಲರೂ ನೋಡುತ್ತಿದ್ದರು. ಆದರೆ ನನ್ನ ಕೈಯಲ್ಲಿದ್ದದ್ದು ಆಂಬರ್ಗ್ರಿಸ್ ಎಂಬುದು ಅವರಿಗೆ ತಿಳಿದಿರಲಿಲ್ಲ’ವೆಂದು ರೊಡ್ರಿಗಸ್ ಎಂಬವರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್‌ ತಿಮಿಂಗಿಲಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ ‘ತೇಲುವ ಚಿನ್ನ’ ಅಥವಾ ‘ಸಮುದ್ರದ ನಿಧಿ’ ಎಂದು ಕರೆಯಲಾಗುತ್ತದೆ.

Related posts

ಯತ್ನಾಳ್‌ಗೆ ಹುಚ್ಚು ನಾಯಿ ಎಂದ್ರಾ ರೇಣುಕಾಚಾರ್ಯ..? ಏನಿದು ಸ್ವಪಕ್ಷೀಯರ ಗುದ್ದಾಟ..?

ಮಾರ್ಗ ಮಧ್ಯೆ ಗಂಡನ ಮನೆಗೆ ಹೋಗಲು ನಿರಾಕರಿಸಿದ ವಧು! ವರನ ವಿರುದ್ಧವೇ ಪೊಲೀಸ್ ಆಪ್ತ ಸಹಾಯವಾಣಿಗೆ ದೂರು..!

Darshan Thoogudeepa: ದರ್ಶನ್‌ ಪ್ರಕರಣ: ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದ ದರ್ಶನ್ ಆಪ್ತ ವಿನೋದ್‌ ಪ್ರಭಾಕರ್..! ದಾಸನನ್ನು ಜೈಲಿನಲ್ಲಿ ಭೇಟಿಯಾದ ಗೆಳೆಯ..!