ಕಾಸರಗೋಡುಕ್ರೈಂ

ಅನುಮಾನಾಸ್ಪದವಾಗಿ ಮೂರು ಹುಲಿಗಳ ಶವ ಪತ್ತೆ..! ತನಿಖೆಗೆ ಆದೇಶಿಸಿದ ಅರಣ್ಯ ಇಲಾಖೆ..!

181
Representative

ನ್ಯೂಸ್ ನಾಟೌಟ್: ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ ನ ಎರಡು ಕಡೆಗಳಲ್ಲಿ ಮೂರು ಹುಲಿಗಳ ಮೃತದೇಹಗಳು ಪತ್ತೆಯಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಬುಧವಾರ(ಫೆ.5) ತನಿಖೆಗೆ ಆದೇಶಿಸಿದೆ.

ಕುರಿಚ್ಯಾಡ್ ಅರಣ್ಯ ವ್ಯಾಪ್ತಿಯಲ್ಲಿ ಎರಡು, ವೈತಿರಿ ಅರಣ್ಯ ವಿಭಾಗದ ಕಾಫಿ ತೋಟದಲ್ಲಿ ಇನ್ನೊಂದು ಹುಲಿಯ ಶವ ಪತ್ತೆಯಾಗಿದೆ.

ಕುರಿಚ್ಯಾಡ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಅಧಿಕಾರಿಗಳು ಎರಡು ಹುಲಿಗಳ ಕಳೇಬರ ಪತ್ತೆ ಹಚ್ಚಿದರೆ, ಮತ್ತೊಂದು ಹುಲಿಯ ಕೊಳೆತ ಶವ ಕೆಲವು ಎಸ್ಟೇಟ್ ಕಾರ್ಮಿಕರು ತೋಟದೊಳಗೆ ನೋಡಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ತನಿಖೆಗೆ ವಿಶೇಷ ತನಿಖಾ ದಳ ರಚಿಸಿ ಅರಣ್ಯ ಸಚಿವ ಎ. ಕೆ. ಶಸೀಂದ್ರನ್ ಆದೇಶಿಸಿದ್ದಾರೆ. ಇತ್ತೀಚೆಗಷ್ಟೇ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಕಾಫಿ ಕಾಯಿ ಕೀಳುತ್ತಿದ್ದ ವೇಳೆ ಹುಲಿ ದಾಳಿಗೆ ಬಲಿಯಾಗಿದ್ದರು. ಮಹಿಳೆಯನ್ನು ಕೊಂದ ಹುಲಿ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿತ್ತು.
ಮೂರು ಹುಲಿಗಳ ಸಾವಿನ ಹಿಂದೆ ಏನಾದರೂ ನಿಗೂಢತೆ ಇದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೇ ಎನ್ನುವುದನ್ನು ತನಿಖೆ ನಡೆಸಲು ಆದೇಶಿಸಲಾಗಿದ್ದು, ಒಂದು ತಿಂಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.  

Click

ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್ ಹಾಕಿದ ನರ್ಸ್ ಅಮಾನತ್ತು..! ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದ್ದೇನು..?

ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಕಂಡು ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು..! ದೇಹದ 14 ಪಕ್ಕೆಲುಬುಗಳು ಮುರಿದಿದ್ದವು ಎಂದ ವೈದ್ಯರು..!

ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ..! ಆದೇಶಕ್ಕೆ ಅಧ್ಯಕ್ಷರ ಸಹಿ

ಶಾಲಾ ವಿದ್ಯಾರ್ಥಿನಿ ಮೇಲೆ 3 ಶಿಕ್ಷಕರಿಂದಲೇ ಅತ್ಯಾಚಾರ..! ಸ್ಥಳೀಯರಿಂದ ಪ್ರತಿಭಟನೆ

See also  ಸುಳ್ಯ ತಾಲೂಕು ಆಸ್ಪತ್ರೆಗೆ ನೇಮಕವಾಗಿದ್ದ ಯುವ ವೈದ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು, ವೈದ್ಯೆಯ ಸಾವಿಗೆ ಕಾರಣವೇನು?
  Ad Widget   Ad Widget   Ad Widget   Ad Widget   Ad Widget   Ad Widget