ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹಂದಿ ಹಿಡಿಯಲು ಹೋದವರು ಹುಲಿಯನ್ನು ಕೊಂದದ್ದೇಕೆ..? ಮೂವರು ಅರೆಸ್ಟ್..!

82
Spread the love

ನ್ಯೂಸ್ ನಾಟೌಟ್ : ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಮೂರು ವರ್ಷದ ಗಂಡು ಹುಲಿಯನ್ನು ಕೊಂದ ಕಾರಣಕ್ಕೆ ಗುರುವಾರ(ನ.28) ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಕಂದನ್​, ಮಾರಿಮುತ್ತು ಮತ್ತು ವೇದನ್​ ಎಂಬ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಗೂಡಲೂರಿನಲ್ಲಿ ಇತ್ತೀಚೆಗೆ ಮೂರು ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಹಂದಿಗಳನ್ನು ಹಿಡಿಯುಲ್ಲಿ ನಿಸ್ಸೀಮರಾಗಿದ್ದ ಈ ಮೂವರನ್ನು ಶಂಕಿಸಿ ವಿಚಾರಣೆ ನಡೆಸಿದಾಗ ಹುಲಿ ಮರಿಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂವರು ಎಂದಿನಂತೆ ಗೂಡಲೂರಿನ ಆರಣ್ಯ ಪ್ರದೇಶದಲ್ಲಿ ಕಾಡು ಹಂದಿ ಹಿಡಿಯಲು ಬಲೆ ಬೀಸಿದ್ದಾರೆ. ಅರಣ್ಯದ ವಿವಿಧ ಪ್ರದೇಶಗಳಲ್ಲಿ ಕ್ಲಚ್​ ತಂತಿಗಳಿಂದ ತಯಾರಿಸಿದ ಬಲೆಯ ಬೋನ್ ​ಗಳನ್ನು ಇಟ್ಟಿದ್ದಾರೆ. ಈ ಬೋನ್​ಗಳನ್ನು ಸಾಮಾನ್ಯವಾಗಿ ಹಂದಿಗಳನ್ನು ಹಿಡಿಯಲು ಬಳಸುತ್ತಾರೆ. ಆದರೆ, ಅಂದು ಹಂದಿಗಳ ಬದಲಾಗಿ ಮೂರು ವರ್ಷದ ಹುಲಿ ಮರಿ ಬೋನ್ ​ಗೆ ಬಿದ್ದಿತ್ತು. ತಂತಿ ಬಲೆ ಹುಲಿಯ ಕುತ್ತಿಯಲ್ಲಿ ಬಿಗಿಹಿಡಿತ ಕಾರಣ ಸ್ಥಳದಲ್ಲೇ ಮೃತಪಟ್ಟಿದೆ.ಇದರಿಂದ ಭಯಕೊಂಡ ಈ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅರಣ್ಯಧಿಕಾರಿ ಗಸ್ತು ಸಂದರ್ಭದಲ್ಲಿ ಪ್ರಕರಣದ ಬೆಳಕಿಗೆ ಬಂದಿದೆ.

”ಮೀಸಲು ಆರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹುಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಇನ್ನು ಮುಂದೆ ಮೀಸಲು ಅರಣ್ಯದಲ್ಲಿ ಗಸ್ತು ಹೆಚ್ಚಿಸಲಾಗುತ್ತದೆ” ಎಂದು ಅರಣ್ಯಧಿಕಾರಿಯೊಬ್ಬರು ತಿಳಿಸಿದ್ದಾರೆ.

Click

https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/jail-kannada-news-viral-video-up-police-praising/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/big-boss-contestent-deepika-das-issue-mother-complaints/
https://newsnotout.com/2024/11/belthangady-puc-girl-nomore-viral-news-marriage-issue-d/
https://newsnotout.com/2024/11/ksrtc-kananda-news-60-students-7-teachers-viral-news-f/
https://newsnotout.com/2024/11/samsath-kannada-news-rahul-priyanka-sonia-oath-taking-viral-news/
https://newsnotout.com/2024/11/centrle-jail-viral-news-police-anita-cctv-issue/
https://newsnotout.com/2024/11/petro-kannada-news-petrol-bomb-issue-family/
See also  ಸುಳ್ಯ: ಮಾರ್ಗ ಮಧ್ಯ ಕಾಣಿಸಿಕೊಂಡ ಕಾಡುಕೋಣ..! ಬೇಂಗಮಲೆ ಮಾರ್ಗವಾಗಿ ಹೋಗುವ ವಾಹನ ಸವಾರರೇ ಇರಲಿ ಎಚ್ಚರ..!
  Ad Widget   Ad Widget   Ad Widget   Ad Widget   Ad Widget   Ad Widget