ಕ್ರೈಂಬೆಂಗಳೂರುವೈರಲ್ ನ್ಯೂಸ್

ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಕಲೆಕ್ಟರ್ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂ. ವಂಚನೆ..! ಕಾನ್ಪುರದಲ್ಲಿ ಫೇಕ್ ಟ್ರೈನಿಂಗ್ ಕೊಡಿಸಿದ್ದ ವಂಚಕರು..!

ನ್ಯೂಸ್ ನಾಟೌಟ್: ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಕಲೆಕ್ಟರ್ ಕೆಲಸ ಕೊಡಿಸುವುದಾಗಿ ಹೇಳಿ ಖದೀಮರು ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ಸಂಬಂಧ ವಿಜಯಪುರದ ಡಾ.ಲಕ್ಷ್ಮಿಕಾಂತ್ ಹೊಸಮನಿ, ಮುರುಳಿ, ಭೀಮರಾವ ಎಂಟಮನಿ, ಬಸು ಕಾಸಪ್ಪ, ಕೂಲಪ್ಪ ಸಿಂಗೆ, ಸಂತೋಷ್, ಶ್ರೀಧರ್ ಸೇರಿ ಒಟ್ಟು 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಆನ್‌ ಲೈನ್‌ ಮೂಲಕ ತರಬೇತಿಗೆ ನಕಲಿ ಆರ್ಡರ್‌ ಕಾಪಿ ಕೊಟ್ಟಿದ್ದ ಖದೀಮರು ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್ ಟ್ರೈನಿಂಗ್ ಕೂಡ ಕೊಡಿಸಿದ್ರು. ಇದನ್ನು ನಂಬಿದ್ದ ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪತ್ರ ಹಿಡಿದು ಉದ್ಯೋಗಕ್ಕೆ ಜಾಯಿನ್‌ ಆಗಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ವಂಚನೆ ಬಗ್ಗೆ ವಿಜಯಪುರದ ಹುಸನಪ್ಪ ಮಾಡ್ಯಾಳ್ ಸಿಸಿಬಿಗೆ ದೂರು‌ ನೀಡಿದ್ದು, 7 ಆರೋಪಿಗಳ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

ರೈಲ್ವೆ ಇಲಾಖೆಯಲ್ಲಿ ಟಿಸಿ ಹುದ್ದೆ ಕೊಡಿಸುವುದಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದನ್ನೇ ನಂಬಿದ್ದ ವಿಜಯಪುರದ ಹುಸನಪ್ಪ ಮಾಡ್ಯಾಳ್, ಶಿವಕುಮಾರ್, ಅಶೋಕ್ ಹಾಗೂ ಇತರರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಬೆಂಗಳೂರು, ವಿಜಯಪುರ ಸೇರಿ ಹಲವು ಕಡೆ ಕರೆಸಿ ಒಬ್ಬೊಬರಿಂದ ಹಂತ ಹಂತವಾಗಿ 20 ರಿಂದ 25 ಲಕ್ಷ ರೂ. ಹಣ ಪಡೆದುಕೊಂಡಿದ್ದರು.

ಹಣ ಪಡೆದುಕೊಂಡು ಆನ್‌ ಲೈನ್‌ ಮೂಲಕ ನಕಲಿ ಟ್ರೈನಿಂಗ್‌ ಆರ್ಡರ್‌ ಕಾಫಿ ಕೂಡ ಕೊಟ್ಟಿದ್ದರು. ನಂತರ ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್‌ ಟ್ರೈನಿಂಗ್ ಕೂಡ ಕೊಡಿಸಿದ್ದರು. ಟ್ರೈನಿಂಗ್ ಮುಗಿದ ಕೆಲ ದಿನಗಳ ನಂತರ ಡ್ಯೂಟಿಗೆ ಜಾಯಿನ್ ಆಗಲು ಹೇಳಿದ್ದಾರೆ. ಕೆಲಸ ಸಿಕ್ಕೇ ಬಿಡ್ತು ಎಂಬ ಖುಷಿಯಲ್ಲಿದ್ದರಿಗೆ ತಿಂಗಳು ಉರುಳಿದ್ರು ನೇಮಕಾತಿ ಪತ್ರ ಬರಲಿಲ್ಲ. ಇದರಿಂದ ಅನುಮಾನಗೊಂಡ ಆಕಾಂಕ್ಷಿಗಳು ಪರಿಶೀಲಿಸಿದಾಗ ಮೋಸ ಹೋಗಿದ್ದು ಗೊತ್ತಾಗಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/12/kannada-news-marriage-5-year-old-viral-bengaluru/
https://newsnotout.com/2024/12/police-commissioner-kannada-news-case-marriage-issue/
https://newsnotout.com/2024/12/bigboss-runner-drone-prathap-issue-arrested-by-tumakur-police/
https://newsnotout.com/2024/12/bus-kananda-news-8-standard-students-kerala-d/
https://newsnotout.com/2024/12/mysore-chamudeshwari-saree-issue-case-from-snehamai-krishna/

Related posts

ಮಂಗಳೂರು: ಬಾಲಕಿಯ ಕೊಲೆ ಪ್ರಕರಣ, ನಾಲ್ವರ ಬಂಧನ, ಕೊಲೆಗೂ ಮೊದಲು ನಡೆದಿತ್ತು ಸಾಮೂಹಿಕ ಅತ್ಯಾಚಾರ

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ..! ಈ ಬಗ್ಗೆ ವಕೀಲ ಜಗದೀಶ್ ಹೇಳಿದ್ದೇನು..? ಇಲ್ಲಿದೆ ವಿಡಿಯೋ

ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ಗೆ ಪ್ರಾಣ ಬೆದರಿಕೆ ಹಾಕಿದ್ಯಾರು..? ಕರ್ನಾಟಕದ ಕೂಲಿ ಕಾರ್ಮಿಕನ ಬಂಧನ..!