ನ್ಯೂಸ್ ನಾಟೌಟ್: ಕಮಲ್ ಹಾಸನ್ ಹೇಳಿಕೆಯಿಂದ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಇಕ್ಕಟ್ಟಿಗೆ ಸಿಲುಕಿದ್ದು, ಇದೀಗ ಸಿನಿಮಾ ನಿರ್ಮಾಪಕರೇ ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಭದ್ರತೆ ಕೊಡಿಸುವಂತೆ ಒತ್ತಾಯಿಸಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕಮಲ್ ಹೇಳಿಕೆಯನ್ನು ವಿರೋಧಿಸಿದ್ದು, ಕ್ಷಮೆ ಕೇಳುವುದಕ್ಕೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತ್ತು.
ಇದೀಗ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ‘ಥಗ್ ಲೈಫ್’ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ ಎಂದಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧವಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಇದೀಗ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.
ಇಂದು (ಮೇ 03) ಬೆಳಿಗ್ಗೆ ಅರ್ಜಿಯ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ, ‘ನಿಮ್ಮ ಹೇಳಿಕೆಗೆ ಸಾಕ್ಷಿ ಒದಗಿಸಿ’ ಎಂದಿದ್ದರು. ಬಳಿಕ, ‘ಜನರ ಭಾವನೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ನೀವು ತಪ್ಪು ಮಾಡಿ, ಅದರ ಸಮರ್ಥನೆಗೆ ನಿಂತಿದ್ದೀರ, ತಪ್ಪು ಮಾಡಿ ನಮಗೆ ರಕ್ಷಣೆ ಕೊಡಿ ಎಂದರೆ ಹೇಗೆ ಸಾಧ್ಯ’ ಎಂದು ಕೋರ್ಟ್ ಕೇಳಿತ್ತು. ಬಳಿಕ ಮಧ್ಯಾಹ್ನದ ವೇಳೆಗೆ ಅಭಿಪ್ರಾಯ ತಿಳಿಸುವಂತೆ ಕಾಲಾವಕಾಶ ನೀಡಿದ್ದರು.
ಮಧ್ಯಾಹ್ನ ವಿಚಾರಣೆ ನಡೆದಾಗ ಕಮಲ್ ಪರ ವಕೀಲರು ವಾದ ಮಂಡಿಸಿ, ಕಮಲ್ ಹಾಸನ್ ಫಿಲಂ ಚೇಂಬರ್ ಗೆ ಇಂದು ಬರೆದಿರುವ ಪತ್ರವನ್ನು ಓದಿ ಹೇಳಿ, ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಹೇಳಿದ್ದಾರೆ. ತಮಿಳಿನಂತೆ ಕನ್ನಡ ಕೂಡಾ ಶ್ರೀಮಂತ ಭಾಷೆ…. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆ ಪಡುತ್ತೇನೆ. ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಮಲ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದಿದ್ದಾರೆ.
ಮತ್ತೆ ವಿವರಿಸಿದ ಕಮಲ್ ಪರ ವಕೀಲ ಧ್ಯಾನ್ ಚಿನ್ನಪ್ಪ, ‘ನಾನೇ ಖುದ್ದಾಗಿ ಕಮಲ್ ಜೊತೆ ಮಾತನಾಡಿದ್ದೇನೆ, ಅವರಿಗೆ ಯಾವುದೇ ದುರುದ್ದೇಶ ಇಲ್ಲ, ಹಾಗಾಗಿ ಅವರು ಕ್ಷಮೆ ಕೇಳಲು ಬಯಸುತ್ತಿಲ್ಲ’ ಎಂದರು.
ಅಂತಿಮವಾಗಿ, ‘ನಿರ್ಮಾಪಕರು ‘ಥಗ್ ಲೈಫ್’ ಸಿನಿಮಾ ಅನ್ನು ಕರ್ನಾಟಕದಲ್ಲಿ ಈಗ ಬಿಡುಗಡೆ ಮಾಡಲು ಬಯಸುತ್ತಿಲ್ಲ, ಈ ಘಟನೆ ವಿಷಯವಾಗಿ ಫಿಲಂ ಚೇಂಬರ್ ಜೊತೆಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆ’ ಎಂದರು. ವಿಚಾರಣೆಯನ್ನು ಜುಲೈ 10ಕ್ಕೆ ನ್ಯಾಯಾಲಯ ಮುಂದೂಡಿತು.
ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಸ್ಫೋಟ..! ಬಿಸಿಸಿಐ ಸ್ಪಷ್ಟನೆ