ನ್ಯೂಸ್‌ನಾಟೌಟ್: ಮನೆಯಲ್ಲೇ ಬೆಳೆದ ಹರಿವೆ ಸೊಪ್ಪಿನ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಮೂವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ಎಂಬಲ್ಲಿ ನಡೆದಿದೆ.
ಅಸ್ವಸ್ಥಗೊಂಡವರನ್ನು ಬೆಳ್ಳಿಪ್ಪಾಡಿಯ ಕೈಲಾಜೆ ಕೊರಗಪ್ಪ ಗೌಡ ಹಾಗೂ ಅವರ ಪತ್ನಿ ಲಲಿತಾ ಹಾಗೂ ಮನೆಗೆ ಬಂದಿದ್ದ ರಮೇಶ ಅಡ್ಕರಗುರಿ ಎಂದು ಗುರುತಿಸಲಾಗಿದೆ.
ಕೈಲಾಜೆ ಕೊರಗಪ್ಪ ಗೌಡ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ತಮ್ಮ ಮನೆಯಲ್ಲಿಯೇ ಬೆಳೆದ ಹರಿವೆಯ ಪದಾರ್ಥ ಮಾಡಿದ್ದರು. ಎಂದಿನಂತೆ ಮಧ್ಯಾಹ್ನ ಊಟ ಸೇವಿಸಿದ್ದರು. ಆದರೆ ಸಂಜೆಯಾಗುತ್ತಲೇ ಪದಾರ್ಥ ಸೇವಿಸಿದ್ದ ಮೂವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.