ಕರಾವಳಿಕೊಡಗುಕ್ರೈಂಸುಳ್ಯ

ಲಂಚದ ಆಸೆಗೆ ಹೋಗಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟರು

384

ನ್ಯೂಸ್‌ನಾಟೌಟ್‌: ಪ್ರಾಮಾಣಿಕತೆ, ಬದ್ಧತೆಯಿಂದ ಸಂಪಾದಿಸಬೇಕು. ಆಗ ಮಾತ್ರ ಅ ಸಂಪತ್ತು ಶಾಶ್ವತವಾಗಿ ಉಳಿಯುತ್ತದೆ. ಆದರೆ ಅನ್ಯಮಾರ್ಗದಿಂದ ಹೋದರೆ ಕೇಡು ಕಟ್ಟಿಟ್ಟ ಬುತ್ತಿ. ಇದಕ್ಕೆ ನಿದರ್ಶನ ಎಂಬಂತ ಘಟನೆ ಮಡಿಕೇರಿ ಡಾ.ಬಿ.ಆರ್. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ನಡೆದಿದೆ.

ಬಡ ಮಹಿಳೆಯೊಬ್ಬರಿಗೆ ಕೋಳಿ ಅಂಗಡಿ ಆರಂಭಿಸಲು ಸ್ವಉದ್ಯೋಗ ಯೋಜನೆಯ ಸಹಾಯಧನ ಮಂಜೂರು ಮಾಡಲು ಕಚೇರಿಯಲ್ಲೆ ಲಂಚ ಪಡೆಯುತ್ತಿದ್ದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್‌, ಕಚೇರಿ ವ್ಯವಸ್ಥಾಪಕಿ ಚೆಲುವಾಂಬ ಹಾಗೂ ತಿರುಮಲ ಸೋಮವಾರ ರೆಡ್‌ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದು ಈಗ ಕಂಬಿ ಎಣಿಸುತ್ತಿದ್ದಾರೆ.

ಮಹಿಳೆ ಯೋಜನೆಯ ಮೊದಲ ಕಂತಿನ ಸಹಾಯಧನ ಪಡೆದಿದ್ದು, ಎರಡನೇ ಕಂತಿನ 1ಲಕ್ಷ ರೂ. ಮಂಜೂರು ಮಾಡುವಾಗ ಭ್ರಷ್ಟ ಅಧಿಕಾರಿಗಳು10000 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಮಹಿಳೆ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಮೈಸೂರು ವಿಭಾಗದ ಎಸ್‌.ಪಿ. ಸುರೇಶ್‌ ಬಾಬು ತಿಳಿಸಿದ್ದಾರೆ.

ಕಾರ್ಯಾಚರಣೆಯ ನೇತೃತ್ವವನ್ನು ಡಿವೈಎಸ್‌ಪಿ ಎಂ.ಎಸ್‌. ಪವನ್‌ಕುಮಾರ್‌ ವಹಿಸಿದ್ದು, ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್‌, ರೂಪಶ್ರೀ ಪಾಲ್ಗೊಂಡಿದ್ದರು. ಒಂದು ತಿಂಗಳಲ್ಲಿ ಮಡಿಕೇರಿಯಲ್ಲಿ ನಡೆದ ಮೂರನೇ ಲೋಕಾಯುಕ್ತ ದಾಳಿ ಇದಾಗಿದೆ.

See also  ಹುಲಿ ಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳು ನಿಗೂಢ ಸಾವು..! ರೈತರು ಬೆಳೆಗಳಿಗೆ ಸಿಂಪಡಿಸಿದ್ದ ಕೀಟ ನಾಶಕಗಳ ಮೇಲೆ ಅನುಮಾನ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget