Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

“ನೀನ್ ಹೊರಗೆ ಸಿಗು ನೋಡ್ಕೊತೀನಿ….”ಎಂದು ಎಲ್ಲರೆದುರು ಕೋರ್ಟ್ ನಲ್ಲಿ ನ್ಯಾಯಾಧೀಶೆಗೆ ಜೀವ ಬೆದರಿಕೆ..! ನಿವೃತ್ತ ಶಿಕ್ಷಕನಿಗೆ 1.10 ವರ್ಷ ಜೈಲು..!

2.8k

ನ್ಯೂಸ್‌ ನಾಟೌಟ್‌: ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರಿಗೆ ನಿವೃತ್ತ ಶಿಕ್ಷಕನೋರ್ವ ಕೋರ್ಟ್ ನಲ್ಲೇ ಎಲ್ಲರೆದುರು ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ದೆಹಲಿಯ ದ್ವಾರಕಾ ಕೋರ್ಟ್ ನಲ್ಲಿ ಈ ಘಟನೆ ನಡೆದಿದ್ದು ಏ.2 ರಂದು ಸಂಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನ್ಯಾಯಾಧೀಶೆ ಶಿವಾನಿ ಮಂಗಲ್ ಎಂಬುವವರು ಏಪ್ರಿಲ್ 2 ರ ಆದೇಶದಲ್ಲಿ, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 (ಚೆಕ್ ಡಿಸ್ಆನರ್) ಅಡಿಯಲ್ಲಿ ಆ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದರು. ನಂತರ ನಿವೃತ್ತ ಶಿಕ್ಷಕ, ನ್ಯಾಯಾಲಯದಲ್ಲೇ ನ್ಯಾಯಾಧೀಶರ ಮೇಲೆ ಕೋಪದಿಂದ ಸಿಡಿಮಿಡಿಗೊಂಡು, ಎಲ್ಲರೆದುರೇ ಬೆದರಿಕೆ ಹಾಕಿದ್ದ.

“ಆರೋಪಿ ಕೂಡ ಯಾವುದೋ ವಸ್ತುವನ್ನು ಹಿಡಿದಿದ್ದನು, ಮತ್ತು ಅದನ್ನು ನ್ಯಾಯಾಧೀಶರ ಮೇಲೆ ಎಸೆಯಲು ಪ್ರಯತ್ನಿಸಿದನು, ಮತ್ತು ಅವನು ತನ್ನ ಪರವಾಗಿ ತೀರ್ಪು ಪಡೆಯಲು ಏನು ಬೇಕಾದರೂ ಮಾಡುವಂತೆ ತನ್ನ ವಕೀಲರಿಗೆ ಒತ್ತಡ ಹೇರಿದ್ದ ಎಂದು ತಿಳಿದುಬಂದಿದೆ.

“ನೀನು ಯಾರು? ಹೊರಗೆ ನನ್ನ ಕೈಗೆ ಸಿಗು, ನೀನು ಹೇಗೆ ಜೀವಂತವಾಗಿ ಮನೆಗೆ ತಲುಪುತ್ತೀಯಾ ನಾನು ನೋಡುತ್ತೇನೆ”. ಎಂದು ನಿವೃತ್ತ ಶಿಕ್ಷಕ ನ್ಯಾಯಾಧೀಶೆಗೆ ಬೆದರಿಕೆ ಹಾಕಿದ್ದಾನೆ
“ನಂತರ ಮತ್ತೆ, ಅವರಿಬ್ಬರೂ ನನ್ನ ಕೆಲಸಕ್ಕೆ ರಾಜೀನಾಮೆ ನೀಡುವಂತೆ (ನನಗೆ) ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದರು, ಮತ್ತು ಇಬ್ಬರೂ ಮತ್ತೆ ಆರೋಪಿಯನ್ನು ಖುಲಾಸೆಗೊಳಿಸುವಂತೆ (ನನಗೆ) ಕಿರುಕುಳ ನೀಡಿದರು, ಇಲ್ಲದಿದ್ದರೆ ಅವರು ನನ್ನ ವಿರುದ್ಧ ದೂರು ದಾಖಲಿಸುತ್ತಾರೆ ಮತ್ತು ನನ್ನ ರಾಜೀನಾಮೆಗೆ ಬಲವಂತವಾಗಿ ವ್ಯವಸ್ಥೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯ ಕಾಯ್ದೆ ಪ್ರಕರಣದಲ್ಲಿ ನಿವೃತ್ತ ಶಿಕ್ಷಕನಿಗೆ 1.10 ವರ್ಷಗಳ ಜೈಲು ಶಿಕ್ಷೆ ಮತ್ತು 6.65 ಲಕ್ಷ ರೂ. ದಂಡ ವಿಧಿಸಿದೆ.

ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಪ್ರೇಮಿಗಳು ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ..! ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದ ಜೋಡಿ..!

See also  ಬಿ.ಸಿ.ರೋಡ್ ನ ಕೈಕಂಬದ ಸಮೀಪ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ..! ಚಾಲಕ ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget