ಕ್ರೈಂಬೆಂಗಳೂರುವೈರಲ್ ನ್ಯೂಸ್

ಬೆದರಿಕೆ ಹಾಕಿ ದುಬಾರಿ ಟೊಮೆಟೊ ತುಂಬಿದ್ದ ಬೊಲೆರೋ ವಾಹನವನ್ನೇ ಕದ್ದ ಕಳ್ಳರು..! ಕಾರಿನಲ್ಲಿ ಹಿಂಬಾಲಿಸಿ ಬಂದ ಕಳ್ಳರ ಪ್ಲಾನ್ ಗೆ ರೈತ ಕಂಗಾಲು!

310

ನ್ಯೂಸ್ ನಾಟೌಟ್ : ಪೆಟ್ರೋಲ್ ದರಗಿಂತಲೂ ದುಬಾರಿಯಾದ ಟೊಮೆಟೊ ಗ್ರಾಹಕರಿಗೆ ಗಗನಕುಸುಮವಾಗಿ ಹೋಗಿದೆ. ಹೀಗಾಗಿ ಕೆಜಿಗೆ 110 ಆಗಿರುವ ಟೊಮೆಟೊ ಕೊಂಡುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ.
ಟೊಮೆಟೊ ಬೆಳೆದ ರೈತರು ತಮ್ಮ ಜಮೀನುಗಳಿಗೆ ಹಗಲಿರುಳು ಕಾವಲು ಕಾಯುವಂತಾಗಿದೆ. ಆದರೆ ಎರಡು ಸಾವಿರಕ್ಕೂ ಹೆಚ್ಚು ಇದ್ದ ಟೊಮೆಟೊ ತುಂಬಿದ ಬೊಲೆರೋ ವಾಹನ ಕಾಣೆಯಾಗಿದ್ದು ರೈತ ಕಂಗಾಲಾಗಿದ್ದಾನೆ.

ರಾಜ್ಯದಲ್ಲಿ ನಿತ್ಯ ತರಕಾರಿಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಟೊಮೆಟೋ ಬದಲಿಗೆ ಪರ್ಯಾಯವಾಗಿ ಹುಣಸೆ ಹಣ್ಣು ಬಳಕೆಗೆ ಜನ ತೀರ್ಮಾನಿಸಿದ್ದಾರೆ.
ಆದರೆ ಇಲ್ಲೊಬ್ಬ ರೈತ ಬೆಳೆದ ಟೊಮೆಟೋ ಇನ್ನೇನು ಮಾರುಕಟ್ಟೆಗೆ ಸಾಗಿಸುವ ಹೊತ್ತಿಗೆ ಟೊಮೆಟೊ ತುಂಬಿದ ಬೊಲೆರೋವನ್ನು ಖದೀಮರು ಕದ್ದಿದ್ದಾರೆ. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಹಿರಿಯೂರಿನಿಂದ ಕೋಲಾರಕ್ಕೆ ಶನಿವಾರ ರೈತ ತಾನು ಬೆಳೆದ ಟೊಮೆಟೋವನ್ನು ಸಾಗಿಸುತ್ತಿದ್ದರು. ಈ ವೇಳೆ ಮೂವರು ಕಾರಿನಲ್ಲಿ ಟೊಮೆಟೊ ವಾಹನವನ್ನು ಹಿಂಬಾಲಿಸಿದ್ದಾರೆ.

ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಮೂವರು ಆರ್‌ಎಮ್‌ಸಿಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೋ ವಾಹನವನ್ನು ಅಡ್ಡಗಟ್ಟಿ ನಾಟಕವಾಡಿದ್ದಾರೆ. ಟೊಮೆಟೊ ತುಂಬಿದ ವಾಹನ ತಮ್ಮ ಕಾರಿಗೆ ಪೀಣ್ಯಾ ಬಳಿ ಟಚ್ ಮಾಡಿದೆ ಎಂದು ವಾದಿಸಿದ್ದಾರೆ. ರೈತ ಮತ್ತು ಡ್ರೈವರ್ ಜೊತೆಗೆ ಮಾತಿಗಿಳಿದಿದ್ದಾರೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಹಲ್ಲೆ ಕೂಡ ಮಾಡಿದ್ದಾರೆ. ಹಣಕ್ಕಾಗಿ ಬೇಡಿಕೆ ಕೂಡ ಇಟ್ಟಿದ್ದಾರೆ.
ರೈತ ಮತ್ತು ಡ್ರೈವರ್ ತಮ್ಮ ಬಳಿ ಹಣವಿಲ್ಲ ಎಂದು ಹೇಳಿದಾಗ ಮೊಬೈಲ್‌ನಿಂದ ಹಣ ಟ್ರಾನ್ಸಫರ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಬಳಿಕ ಬೊಲೆರೋದಲ್ಲಿ ಟೊಮೆಟೋ ಕಂಡು ತಮ್ಮ ವರಸೆ ಬದಲಾಯಿಸಿದ್ದಾರೆ. ರೈತ ಮತ್ತು ಡ್ರೈವರ್ ಕರೆದುಕೊಂಡು ಚಿಕ್ಕಜಾಲ ತನಕ ಹೋಗಿ ಅಲ್ಲಿ ರೈತನನ್ನು ಬಿಟ್ಟು ಬೆದರಿಕೆ ಹಾಕಿ ಡ್ರೈವರ್ ಮತ್ತು ಟೊಮೆಟೋ ಸಮೇತ್ ಪರಾರಿಯಾಗಿದ್ದಾರೆ.
ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ಇತ್ತ ಟೊಮೆಟೊ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ.

See also  ಬೆಳಿಗ್ಗೆ ಪೊಲೀಸ್, ರಾತ್ರಿಯಾಗ್ತಿದ್ದಂತೆ ಕಳ್ಳ..! ಏನಿದು ಮುಖ್ಯಪೇದೆಯ ಕಳ್ಳ-ಪೊಲೀಸ್ ಆಟ? ಈತನ ಬಂಧನವಾದದ್ದೇಗೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget