ಕ್ರೈಂವೈರಲ್ ನ್ಯೂಸ್

ಅನಧಿಕೃತ ಮಳಿಗೆ ತೆರವಿಗೆ ಬಂದವರಿಗೆ ಮಚ್ಚು ತೋರಿಸಿ ಬೆದರಿಕೆ..! ಘಟನೆ ನಡೆದದ್ದೆಲ್ಲಿ..?

ನ್ಯೂಸ್ ನಾಟೌಟ್: ಅನಧಿಕೃತ ಮಳಿಗೆ ಖಾಲಿ ಮಾಡಿಸಲು ಹೋದ ನಗರಸಭೆ ಸಿಬ್ಬಂದಿಗೆ ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆ ರಾಯಚೂರು ನಗರದ ಮಹಿಳಾ ಸಮಾಜದ ಬಳಿ ನಡೆದಿದೆ.

ಅನಧಿಕೃತವಾಗಿ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಯಾವುದೇ ತೆರಿಗೆ, ಬಾಡಿಗೆ ಕೊಡದೇ ವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ದೂರು ಬಂದಿತ್ತು ಎನ್ನಲಾಗಿದೆ. ಇವರಿಗೆ ಕಳೆದ ಏಪ್ರಿಲ್ ತಿಂಗಳಲ್ಲೇ ಮಳಿಗೆ ಖಾಲಿ ಮಾಡುವಂತೆ ನಗರಸಭೆ ಸಿಬ್ಬಂದಿ ನೋಟಿಸ್ ನೀಡಿದ್ದರು.

ನೋಟಿಸ್ ಕೊಟ್ಟರೂ ವ್ಯಾಪಾರ ವಹಿವಾಟು ಮುಂದುವರಿಸಿದ್ದರು. ನೋಟಿಸ್ ಅವಧಿ ಮುಗಿದಿರೋದ್ರಿಂದ ಇಂದು(ಫೆ.23) ನಗರಸಭೆ ಸಿಬ್ಬಂದಿ ಮಳಿಗೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ರು. ಈ ವೇಳೆ ಮಳಿಗೆ ಖಾಲಿ ಮಾಡಿ ಎಂದಿದ್ದಕ್ಕೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿರುವ ವ್ಯಾಪಾರಿಗಳು ಮಚ್ಚು ಹಿಡಿದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Related posts

ಟ್ರಾಫಿಕ್ ಪೊಲೀಸ್ ನನ್ನು 1ಕಿ.ಮೀ ವರೆಗೆ ಕಾರಿನಲ್ಲಿ ಎಳೆದೊಯ್ದ ಕಿರಾತಕ! ಇಲ್ಲಿದೆ ವಿಡಿಯೋ

40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಮದುವೆಯಾದ ದಂಪತಿ..! ವಿಧವಾ ಪಿಂಚಣಿಗಾಗಿ ದಂಪತಿಯ ನಾಟಕ..!

ಡಾ.ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯ ರೈ ಮಗಳು, ಗಂಧದ ಗುಡಿಯ ಹಿರಿಮೆಯನ್ನು ಹೊಗಳಿದ ಫ್ಯಾನ್ಸ್..! ಇಲ್ಲಿದೆ ವೈರಲ್ ವಿಡಿಯೋ