ಕರಾವಳಿಭಕ್ತಿಭಾವ

ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗನಿಗೆ ವಿಶೇಷ ಪೂಜೆ,ಭಕ್ತಿ ಪರವಶರಾದ ಸಾವಿರಾರು ಭಕ್ತರು..!

270

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿಯ ಸಂಭ್ರಮ ರಂಗೇರಿದೆ.ತುಳುನಾಡಿನಲ್ಲಿ ನಾಗರಾಧಾನೆಗೆ ವಿಶೇಷ ಸ್ಥಾನ ಮಾನವನ್ನೇ ನೀಡಲಾಗಿದೆ. ಹೂ ಸಿಯಾಳ ಹಿಂಗಾರದೊಂದಿಗೆ ನಾಗಬನಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ.ಪ್ರಕೃತಿ ಆರಾಧನೆಯ ಮಹತ್ವ ಸಾರುವ ನಾಗರ ಪಂಚಮಿಯ ಈ ವಿಶೇಷ ದಿನದಂದು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಕರಾವಳಿಯ ವಿವಿಧೆಡೆಯ ನಾಗಾರಾಧನೆಯ ಕ್ಷೇತ್ರಗಳಲ್ಲಿ ಸಂಭ್ರಮದ ನಾಗರಪಂಚಮಿ ನಡೆಯುತ್ತಿದೆ. ಪ್ರಸಿದ್ಧ ನಾಗಾರಾಧನೆ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ನಾಗಬನದಲ್ಲಿರುವ ವಿಗ್ರಹಗಳಿಗೆ ಹಾಲು, ಎಳನೀರ ಅಭಿಷೇಕ ಮಾಡಿ ಭಕ್ತರು ಪುನೀತರಾಗುತ್ತಿದ್ದಾರೆ.ಅಭಿಷೇಕ ನೆರವೇರಿಸಲೆಂದೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಕುಕ್ಕೆಗೆ ಭೇಟಿ ನೀಡುತ್ತಾ ದೇವರ ದರ್ಶನ ಪಡೆಯುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದು ಪುಳಕಿತರಾಗುತ್ತಿದ್ದಾರೆ.ಕಷ್ಟ – ಕಾರ್ಪಣ್ಯಗಳು ದೂರ ಮಾಡುವಂತೆ ಬೇಡಿಕೊಳುತ್ತಿದ್ದಾರೆ. ಈ ಕ್ಷೇತ್ರಕ್ಕೆ ಭಕ್ತರು ವಿವಿಧೆಡೆಯಿಂದ ಬಂದಿದ್ದು, ವರ್ಷದಲ್ಲೊಮ್ಮೆ ಬರುವ ನಾಗರಪಂಚಮಿ ದಿನದಂದು ನಾಗದೇವರ ದರ್ಶನ ಪಡೆಯಬೇಕು ಎಂಬ ಉತ್ಸಾಹದಲ್ಲಿ ಸಾವಿರಾರು ಭಕ್ತರಿದ್ದು,ಭಕ್ತಿಪರವಶರಾದರು.

ಒಟ್ಟಿನಲ್ಲಿ ಕರಾವಳಿಯಲ್ಲಿ ಕೂಡು ಕುಟುಂಬ ಪದ್ದತಿಯ ಕೇಂದ್ರ ಬಿಂದುವಾಗಿರುವ ನಾಗರ ಪಂಚಮಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ.

See also  45 ಕೋಟಿಯ ಐಷಾರಾಮಿ ಮನೆ ಖರೀದಿಸಿದ ಕುಡ್ಲದ ಕುವರಿ ಪೂಜಾ ಹೆಗ್ಡೆ ..! ಇಲ್ಲಿದೆ ಸಂಪೂರ್ಣ ವಿವರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget