ಕರಾವಳಿ

ತೊಡಿಕಾನ: ಮಹಿಳೆಗೆ ಕತ್ತಿಯಿಂದ ಕಡಿದು ಪರಾರಿಯಾದ ಯುವಕ

531

ನ್ಯೂಸ್ ನಾಟೌಟ್ : ಯುವಕನೊಬ್ಬ ಮಹಿಳೆಗೆ ಕತ್ತಿಯಿಂದ ಕಡಿದು ಪರಾರಿಯಾಗಿರುವ ಘಟನೆ ಸೆ. 9 ರಂದು ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಕಲ್ಲಂಬಳ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂ ಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾದ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ತೊಡಿಕಾನ ಕಲ್ಲಂಬಳದ ಹರಿಣಾಕ್ಷಿ ಎಂಬ ಮಹಿಳೆ ತೊಡಿಕಾನ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಯಾಗಿದ್ದಾರೆ. ಸೆ. 9 ರಂದು ಸಂಜೆ ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದಾಗ ಕಲ್ಲಂಬಳ ಬಸ್ ನಿಲ್ದಾಣದ ಬಳಿ ಕಾದು ಕುಳಿತಿದ್ದ ಸುರೇಂದ್ರ ಎಂಬ ಯುವಕ ಏಕಾಏಕಿ ಕತ್ತಿಯಿಂದ ಕಡಿದನೆನ್ನಲಾಗಿದೆ. ಮಹಿಳೆ ಯ ಕತ್ತಿನ ಭಾಗಕ್ಕೆ ಕತ್ತಿಬೀಸಿದಾಗ ಆಕೆ ಕೈ ಅಡ್ಡಹಿಡಿದಿದ್ದು ಎರಡೂ ಕೈಗಳಿಗೆ ಕತ್ತಿಯೇಟು ಬಿತ್ತೆನ್ನಲಾಗಿದೆ. ಸೊಂಟದ ಭಾಗಕ್ಕೂ ಕತ್ತಿಯಿಂದ ಕಡಿದಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡರು.

ಹರಿಣಾಕ್ಷಿಯವರ ಮನೆಯವರು ಹಾಗೂ ಸ್ಥಳೀಯರು ಬಂದು ಹರಿಣಾಕ್ಷಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕ ಸುರೇಂದ್ರ ತನ್ನ ಬೈಕ್ ಹತ್ತಿಪರಾರಿಯಾಗಿದ್ದಾನೆ. ಯುವಕ ಸುರೇಂದ್ರ ಹಾಗೂ ಆತನ ತಂದೆ ಕರುಣಾಕರರ ಮೇಲೆ ಮಹಿಳೆ ದೂರು ನೀಡಿದ್ದಾರೆ. ಇಬ್ಬರೂ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಯುವಕ ಹಾಗೂ ಮಹಿಳೆಯ ವಿಚಾರವಾಗಿ ವರ್ಷದ ಹಿಂದೆ ಎರಡೂ ಕಡೆಯವರ ಮಧ್ಯೆ ಹೊಡೆದಾಟ ನಡೆದಿದೆ. ಅದೇ ವಿಚಾರದಲ್ಲಿ ಈಗ ಘಟನೆ ನಡೆದಿದೆ ಎನ್ನಲಾಗಿದೆ.

See also  ಕಡಬ: ತಡರಾತ್ರಿ ಮಸೀದಿಗೆ ನುಗ್ಗಿ 'ಜೈಶ್ರೀರಾಮ್' ಘೋಷಣೆ, ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರಿಂದ ಓರ್ವನ ಬಂಧನ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget