ಕರಾವಳಿ

ಕರಾವಳಿ ದಸರಾದಲ್ಲಿ ಈ ಬಾರಿ ದೈವಗಳ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ..! ಈ ದಿಟ್ಟ ನಿರ್ಧಾರದ ಹಿಂದಿರುವ ಕಾರಣವೇನು..?

ನ್ಯೂಸ್ ನಾಟೌಟ್: ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ ಶ್ರೀಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ಅಕ್ಟೋಬರ್ 25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಟ್ಯಾಬ್ಲೊ, ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ, ಇಂತಹ ಟ್ಯಾಬ್ಲೊಗಳು ಬಂದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ. ಯಾವುದೇ ಜಾತಿ – ಧರ್ಮ – ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೊಗಳಿಗೂ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

ಸಾಮರಸ್ಯದ ದಸರಾಕ್ಕೆ ಈ ಬಾರಿ ಮಂಗಳೂರು ದಸರಾ ಸಾಕ್ಷಿಯಾಗಲಿದೆ. ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಂತೆ ಕ್ರೈಸ್ತ ಧರ್ಮದವರು ಸೇರಿದಂತೆ ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ತರಲಿದ್ದಾರೆ. ಮಂಗಳೂರು ದಸರಾದಲ್ಲಿ ಪ್ರತಿ ಒಂದೊಂದು ವಿಶೇಷವಿರುತ್ತದೆ ಎಂದು ತಿಳಿಸಿದ್ದಾರೆ.

Related posts

ಬಿಜೆಪಿ ಮಂಡಲದ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ

ಬಂಟ್ವಾಳ: ಸಲಿಂಗ ಲೈಂಗಿಕ ಕಿರುಕುಳ ನೀಡಿದ್ದ ಮದ್ರಸಾ ಅಧ್ಯಾಪಕ! 53 ವರ್ಷ ಕಠಿಣ ಸಜೆ ಮತ್ತು ದಂಡ!

ಕಾಂತಾವರ, ಮಿಯ್ಯಾರು ಗ್ರಾಮಕ್ಕೆ ಜನನಾಯಕನ ಭೇಟಿ, ಕಾರ್ಕಳದ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಚರ್ಚೆ