ಕರಾವಳಿಪುತ್ತೂರು

ಪುತ್ತೂರು ಶಾಸಕರ ಆಪ್ತನ ಮನೆಯವರನ್ನು ಕಟ್ಟಿ ಹಾಕಿ ದರೋಡೆ ,ಮನೆ ಮುಂದಿನ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ನಗ-ನಗದು ದೋಚಿದ ಕಳ್ಳರು..!

210

ನ್ಯೂಸ್ ನಾಟೌಟ್ : ದರೋಡೆಕೋರರು ಮನೆಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆಗೈದ ಘಟನೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ವರದಿಯಾಗಿದೆ.ಮನೆಯ ಮುಂದಿನ ಬಾಗಿಲು ಮುರಿದು ಮನೆಯೊಳಗೆ ದರೋಡೆಕೋರರು ನುಗ್ಗಿದ್ದಾರೆ ಎಂದು ತಿಳಿದು ಬಂದಿದೆ.

ಗುರುಪ್ರಸಾದ್ ರೈ ಎಂಬವರಿಗೆ ಸೇರಿದ ಮನೆ ಇದಾಗಿದ್ದು,ಇವರು ಗ್ರಾ.ಪಂ. ಮಾಜಿ ಸದಸ್ಯರೂ ಆಗಿದ್ದರು. ಮಾತ್ರವಲ್ಲ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತವಲಯದಲ್ಲಿಯೂ ಗುರುತಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮನೆಯಲ್ಲಿ ಗುರುಪ್ರಸಾದ ಮತ್ತು ಅವರ ತಾಯಿ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು,ಗುರುಪ್ರಸಾದ್ ಕುತ್ತಿಗೆಗೆ ಚಾಕು ಹಿಡಿದು ದರೋಡೆಕೋರರು ನಗ-ನಗದು ದೋಚಿದ್ದಾರೆ.

ಸುಮಾರು 40 ಸಾವಿರ ನಗದು ಹಾಗೂ 15 ಪವನ್ ಚಿನ್ನವನ್ನು ಲಪಟಾಯಿಸಿದ್ದು,ಇಂದು ಸುಮಾರು 2 ಗಂಟೆಗೆ ಈ ಘಟನೆ ಸಂಭವಿಸಿದೆ.ಸುಮಾರು 8 ಜನರಿದ್ದ ದರೋಡೆಕೋರರ ತಂಡ ಇದಾಗಿದ್ದು,ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ ನೀಡಿದೆ.ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಪುತ್ತೂರು ಡಿವೈಎಸ್ಪಿ ಗಾನ.ಪಿ.ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಗಂಡನಿಂದ ಮಾನಸಿಕ ಕಿರುಕುಳ: ಸಂಬಂಧಿಕನೊಂದಿಗೆ ಓಡಿ ಹೋದ ಎರಡು ಮಕ್ಕಳ ತಾಯಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget