ಕರಾವಳಿ

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿದ್ದ ಕಳ್ಳರು ಅಂದರ್..!6 ಲಕ್ಷ ರೂ. ಮೌಲ್ಯದ ಚಿನ್ನ ಕದ್ದವರು ಸಿಕ್ಕಿಬಿದ್ದಿದ್ದೇಕೆ?

187

ನ್ಯೂಸ್ ನಾಟೌಟ್: ಮಂಗಳೂರಿನ ಕಾರ್ ಸ್ಟ್ರೀಟ್‌ನ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿರುವ ಘಟನೆ ವರದಿಯಾಗಿದೆ.

ಉಳ್ಳಾಲದ ಮಂಜನಾಡಿಯ ಊರುಮನೆ ನಿವಾಸಿ ಮಹಮ್ಮದ್ ಸಿನಾನ್(25), ನಾಟೆಕಲ್ ನಿವಾಸಿ‌ ಹೈದರ್ ಆಲಿ ಆಸಿಲ್(20), ನಾಟೆಕಲ್‌ನ ಅಸೈಗೋಳಿ ನಿವಾಸಿ‌ ಮೊಹಮ್ಮದ್ ತಸ್ವೀರ್(34) ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ. ಜ್ಯುವೆಲ್ಲರಿ ಶಾಪ್‌ನ ಸಿಬ್ಬಂದಿ ಗಮನವನ್ನು ಬೇರೆಡೆಗೆ ಸೆಳೆದು 97.11 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣ ದೋಚಿ ಇವರು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಗತಿ ಜ್ಯುವೆಲ್ಲರ್ಸ್ ಮಾಲೀಕ ವಿನೋದ್ ಶೇಟ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಿ 6,00,000 ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿರುವ ಸ್ಕೂಟರ್, 2 ಮೊಬೈಲ್‌ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

See also  ಸಿಎಂ ಆಯ್ಕೆ ಹೈಡ್ರಾಮಕ್ಕೆ ಕೊನೆಗೂ ತೆರೆ ,ಸಿದ್ದರಾಮಯ್ಯ ಮುಖ್ಯಮಂತ್ರಿ,ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget