ಕರಾವಳಿ

ಬೆಳ್ತಂಗಡಿ: ಚರ್ಮರೋಗಕ್ಕೆ ರಾಮಬಾಣವೆಂಬಂತಿದ್ದ ಇಲ್ಲಿ ನೀರೇ ಇಲ್ಲ! ಇದೇ ಮೊದಲ ಬಾರಿ ಬತ್ತಿ ಹೋಗಿರುವ ಬಿಸಿ ನೀರ ಚಿಲುಮೆ

297

ನ್ಯೂಸ್ ನಾಟೌಟ್ : ಚರ್ಮ ರೋಗ ನಿವಾರಕ ಗುಣವನ್ನು ಹೊಂದಿದ್ದಂತಹ ಬಿಸಿ ನೀರ ಚಿಲುಮೆಯು ಈ ಬಾರಿ ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿದೆ.ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯಲ್ಲಿ ನೀರಿನ ಅಂಶವೇ ಇಲ್ಲದಂತಾಗಿದೆ.

ಇಲ್ಲಿ ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದು, ಚರ್ಮರೋಗಕ್ಕೆ ಈ ನೀರು ರಾಮಬಾಣವೆಂದೇ ಹೇಳಲಾಗುತ್ತಿದೆ.ಇಲ್ಲಿ ಸ್ನಾನ ಮಾಡುವುದರಿಂದ ಬಹಳಷ್ಟು ಬಗೆಯ ಚರ್ಮ ವ್ಯಾಧಿಗಳು ಗುಣವಾಗುತ್ತವೆ ಎಂಬ ಮಾತಿದೆ.ಬಹಳಷ್ಟು ಮಂದಿ ಇಲ್ಲಿನ ನೀರನ್ನು ಕ್ಯಾನ್‌ಗಳಲ್ಲಿ ತುಂಬಿಸಿ ಕೊಡೊಯ್ಯುತ್ತಿದ್ದರು.ಆದರೆ ವಿಪರ್ಯಾಸವೆಂಬಂತೆ ಇದೇ ಮೊದಲ ಬಾರಿ ನೀರು ಬತ್ತಿ ಹೋಗಿದೆ. ನೀರೇ ಇಲ್ಲದ ಸ್ಥಳವೇನೋ ಎಂಬಂತೆ ಭಾಸವಾಗುತ್ತಿದೆ.ಸತತ ಬಿಸಿಲ ಬೇಗೆಯಿಂದ ಪರಿಸರದೆಲ್ಲೆಡೆ ಜಲ ಮೂಲಗಳು ಬತ್ತಲಾರಂಭಿಸಿವೆ.ಏಪ್ರಿಲ್ ತಿಂಗಳಲ್ಲೇ ಇಷ್ಟೊಂದು ಪ್ರಮಾಣದಲ್ಲಿ ನೀರು ಬತ್ತಿ ಹೋದರೆ ಇನ್ನೊಂದು ತಿಂಗಳ ಭವಿಷ್ಯ ಹೇಗೆ ಎಂದು ಜನ ಚಿಂತೆಗೊಳಗಾಗಿದ್ದಾರೆ.

See also  ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಅನಾರೋಗ್ಯ, ಉಡುಪಿಯ ಆಸ್ಪತ್ರೆಗೆ ದಾಖಲು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget