ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ನಿವೃತ್ತ ಶಿಕ್ಷಕರ ಮನೆಯಲ್ಲಿ ನಗದು, ಚಿನ್ನಾಭರಣ ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ..! ಪತ್ರ ನೋಡಿ ಪೊಲೀಸರೇ ಶಾಕ್..! ಅದರಲ್ಲಿ ಅಂತದ್ದೇನಿತ್ತು..?

ನ್ಯೂಸ್ ನಾಟೌಟ್: ನಿವೃತ್ತ ಶಿಕ್ಷಕ ದಂಪತಿಯ ಮನೆಯಲ್ಲಿ ಕಳ್ಳನೊಬ್ಬ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳು ಮತ್ತು ನಗದು ಸಮೇತ ಪರಾರಿಯಾಗಿದ್ದಾನೆ. ಆದರೆ ಅದರ ಜತೆಗೆ ಆತ ಅಲ್ಲಿ ಕ್ಷಮಾಪಣೆ ಪತ್ರವೊಂದನ್ನು ಸಹ ಇರಿಸಿ ಹೋದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮೇಗ್ನಾನಪುರಂನ ಸಥಾಂಕುಲಂ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ.

79 ವರ್ಷದ ಚಿತಿರಾಯ್ ಸೆಲ್ವಿನ್ ಮತ್ತು ಅವರ ಪತ್ನಿ ಇಬ್ಬರೂ ನಿವೃತ್ತ ಶಿಕ್ಷಕರು. ಜೂನ್ 17ರಂದು ಮಗನನ್ನು ಭೇಟಿ ಮಾಡಲು ಅವರು ತೂತುಕುಡಿ ಜಿಲ್ಲೆಯಿಂದ ಸುಮಾರು 600 ಕಿಮೀ ದೂರದಲ್ಲಿರುವ ಚೆನ್ನೈಗೆ ತೆರಳಿದ್ದರು. ಮನೆಯಲ್ಲಿ ತಾವು ಇಲ್ಲದೆ ಇರುವಾಗ ಸ್ವಚ್ಛಗೊಳಿಸುವ ಹೊಣೆಯನ್ನು ಕೆಲಸದಾಕೆ ಸೆಲ್ವಿಗೆ ವಹಿಸಿದ್ದರು. ಜೂನ್ 26ರಂದು ಎಂದಿನಂತೆ ಸೆಲ್ವಿ ಮನೆ ಕ್ಲೀನ್ ಮಾಡಲು ಮನೆಗೆ ಬಂದಾಗ ಮುಖ್ಯ ಬಾಗಿಲು ತೆರೆದಿರುವುದನ್ನು ಕಂಡು ಹೆದರಿದ್ದಾಳೆ. ಕೂಡಲೇ ಆಕೆ ಚಿತಿರಾಯ್ ಸೆಲ್ವಿನ್ ಅವರಿಗೆ ಕರೆ ಮಾಡಿ ಕಳ್ಳತನದ ವಿಚಾರ ತಿಳಿಸಿದ್ದಾಳೆ.

ಚೆನ್ನೈನಲ್ಲಿದ್ದ ಸೆಲ್ವಿನ್ ದಂಪತಿ, ತರಾತುರಿಯಲ್ಲಿ ಊರಿಗೆ ಮರಳಿದ್ದರು. ಅವರು ಪರಿಶೀಲನೆ ನಡೆಸಿದಾಗ 60 ಸಾವಿರ ರೂ ನಗದು ಹಣ, 12 ಗ್ರಾಂ ಚಿನ್ನದ ಆಭರಣ ಹಾಗೂ ಒಂದು ಜೋಡಿ ಬೆಳ್ಳಿ ಕಾಲ್ಗೆಜ್ಜೆ ನಾಪತ್ತೆಯಾಗಿರುವುದು ಕಂಡುಬಂದಿತ್ತು. ಆ ಶಿಕ್ಷಕರ ಮನೆಗೆ ಬಂದು ಶೋಧ ನಡೆಸಿದ ಪೊಲೀಸರಿಗೆ ಕಳ್ಳ ಬಿಟ್ಟು ಹೋಗಿದ್ದಾನೆ ಎನ್ನಲಾದ ಕ್ಷಮಾಪಣೆ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿ ಆತ ಮನೆ ಮಾಲೀಕರ ಕ್ಷಮೆ ಕೋರಿದ್ದು, “ನನ್ನನ್ನು ಕ್ಷಮಿಸಿ. ಇದನ್ನು ಇನ್ನು ಒಂದು ತಿಂಗಳಲ್ಲಿ ವಾಪಸ್ ನೀಡುತ್ತೇನೆ. ನನ್ನ ಮನೆಯಲ್ಲಿ ಒಬ್ಬರಿಗೆ ಅನಾರೋಗ್ಯ ಇರುವ ಕಾರಣ ಹೀಗೆ ಮಾಡುತ್ತಿದ್ದೇನೆ” ಎಂದು ಆತ ಪತ್ರ ಬರೆದಿಟ್ಟು ಹೋಗಿದ್ದಾನೆ. ಇದೇ ರೀತಿಯ ಘಟನೆ ಕಳೆದ ವರ್ಷ ಕೇರಳದಲ್ಲಿ ನಡೆದಿತ್ತು.

Click 👇

https://newsnotout.com/2024/07/team-india-kannada-news-world-t20-kannada-news-today-grand-entry
https://newsnotout.com/2024/07/yuvarajkumar-divorce-case-shri-devi-opp-kannada-news-sandalwood
https://newsnotout.com/2024/07/dengue-health-kannada-news-health-department-officer-nomore-kannada-news
https://newsnotout.com/2024/07/pen-issue-kannada-news-baby-case-hospitalized-but-nomore

Related posts

Shirur landslide| ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆ..! ಲಾರಿಯ ಅವಶೇಷಗಳ ಜೊತೆಗೆ ದೊರೆತ 2 ಮೃತದೇಹಗಳು..!

ನಟ ದರ್ಶನ್‌ ಗೆ ಆಪರೇಷನ್‌ ಮಾಡಬೇಕಿದೆ, ಜಾಮೀನು ನೀಡಿ ಎಂದು ಮನವಿ ಸಲ್ಲಿಸಿದ ವಕೀಲರು..! ಹೈಕೋರ್ಟ್‌ ಈ ಬಗ್ಗೆ ಹೇಳಿದ್ದೇನು..?

ಆ ಒಬ್ಬನ ತಪ್ಪಿನಿಂದ ಆದ ರೈಲು ಅಪಘಾತದಿಂದ 290 ಜನ ಬಲಿ, ಅಪಘಾತಕ್ಕೆ ಕಾರಣವಾಯಿತು ಆತನ ನಿರ್ಲಕ್ಷ್ಯ