ಕ್ರೈಂಬೆಂಗಳೂರು

ಪೊಲೀಸರೆಂದು ವಿದೇಶಿ ಪ್ರಜೆಯಿಂದ ಡಾಲರ್ ದೋಚಿ ಪರಾರಿ! ಕಾರು ತಪಾಸನೆಯ ನಾಟಕವಾಡಿದ್ದ ಖದೀಮರು!

223

ನ್ಯೂಸ್ ನಾಟೌಟ್ :  ತಾವು ಪೊಲೀಸರೆಂದು ಹೇಳಿ, ಯಾಮಾರಿಸಿ ವಿದೇಶಿ ಪ್ರಜೆಯ 4 ಲಕ್ಷ ರೂ. ಮೌಲ್ಯದ ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಯೆಮನ್ ದೇಶದ ಪ್ರಜೆ ಗೇದ್ ಸೈಫ್ ಮೋಕ್ಬೆಲ್ ಅವರ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ ಎನ್ನಲಾಗಿದೆ. ಮೋಕ್ಬೆಲ್ ಕಮ್ಮನಹಳ್ಳಿಯ ಎಂಪೈರ್ ಹೋಟೆಲಿಗೆ ಹೋಗುತ್ತಿದ್ದ ಸಂದರ್ಭ ಅವರ ಕಾರನ್ನು ತಡೆದ ಅಪರಿಚಿತರು ನಾವು ಪೊಲೀಸರು, ಕಾರನ್ನು ಪರಿಶೀಲಿಸಬೇಕೆಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದು, ವಿದೇಶಿ ವ್ಯಕ್ತಿಯ ಕಾರನ್ನು ಪರಿಶೀಲಿಸಿದ್ದಾರೆ. ಬಳಿಕ ಆತನ ಪಾಕೇಟ್‌ನಲ್ಲಿದ್ದ 5,000 ಅಮೆರಿಕನ್ ಡಾಲರ್ ಅನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ರೀಲ್ಸ್‌ ವಿಡಿಯೋಗಾಗಿ ನದಿಗಿಳಿದ ವೇಳೆ ಕೊಚ್ಚಿ ಹೋದ ಯುವತಿ..! ವಿಡಿಯೋ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget