ಕರಾವಳಿ

ಅಖಿಲಾಂಡೇಶ್ವರಿ ಮನೆಯಲ್ಲಿ ಕಳ್ಳತನ

358

ನ್ಯೂಸ್ ನಾಟೌಟ್: ಜನಪ್ರಿಯ ಪಾರು ಧಾರವಾಹಿ ನಟಿ ವಿನಯಾ ಪ್ರಸಾದ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಂದಿನಿ ಲೇಔಟ್‌ 4ನೇ ಹಂತದ ರೈಲ್ವೆ ಮೆನ್ಸ್ ಕಾಲೊನಿಯಲ್ಲಿ ಪತಿ ಜೊತೆ ವಾಸವಿರುವ ವಿನಯಾ ಪ್ರಸಾದ್ ಅವರು ಕಳ್ಳತನ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ವಿನಯಾ ಪ್ರಸಾದ್ ದಂಪತಿ ಅ. 22ರಂದು ಉಡುಪಿಗೆ ಹೋಗಿದ್ದರು. ಅ. 26ರಂದು ಸಂಜೆ ಮನೆಗೆ ವಾಪಸು ಬಂದು ನೋಡಿದಾಗ, ಕಳ್ಳತನ ಗಮನಕ್ಕೆ ಬಂದಿದೆ. ಮನೆಯ ಬಾಗಿಲು ಮೀಟಿ ಒಳನುಗ್ಗಿದ್ದ ಕಳ್ಳರು, ಹಲವೆಡೆ ಹುಡುಕಾಡಿದ್ದಾರೆ. ಕೊಠಡಿಯ ಡ್ರಾಯರ್‌ನಲ್ಲಿದ್ದ ₹ 7 ಸಾವಿರ ನಗದು ಕದ್ದೊಯ್ದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

See also  ಗೂನಡ್ಕ: ಕಮರಿಗೆ ಉರುಳಿದ ಪೂರ್ಣಿಮಾ ಬಸ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget